ಕಲಬುರಗಿ: ಪರಿಸರ ಹಾಗೂ ಜೀವಸಂಕುಲಕ್ಕೆ ಹಾನಿಕಾರಕವಾಗಿರುವ ಪ್ಲಾಸ್ಟಿಕ್ನಿಂದ ಉಂಟಾಗುತ್ತಿರುವ ತೊಂದರೆ ಬಗ್ಗೆ ಎಸ್.ಬಿ.ಆರ್ ಶಾಲೆಯ ಪುಟ್ಟ ಮಕ್ಕಳು ನೃತ್ಯದ ಮೂಲಕ ಪ್ರಸ್ತುತಪಡಿಸಿದರು.
ಪ್ಲಾಸ್ಟಿಕ್ ಮುಕ್ತಗೊಳಿಸಿ...ಪುಟ್ಟ ಮಕ್ಕಳಿಂದ ಸಂದೇಶ
ಪರಿಸರ ಹಾಗೂ ಜೀವಸಂಕುಲಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ನ್ನು ದೇಶಾದ್ಯಂತ ನಿಷೇಧವಾಗಬೇಕಾಗಿದೆ. ಈ ಕುರಿತ ಜಾಗೃತಿಯನ್ನು ಎಸ್.ಬಿ.ಆರ್ ಶಾಲೆಯ ಪುಟ್ಟ ಮಕ್ಕಳು ನೃತ್ಯದ ಮೂಲಕ ಪ್ರಸ್ತುತಪಡಿಸಿದರು.
ಮಂಗಳವಾರದಂದು ಎಸ್.ಬಿ.ಆರ್ ಮೈದಾನದಲ್ಲಿ ಆಯೋಜಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಎಸ್.ಬಿ.ಆರ್ ವಸತಿ ಪಬ್ಲಿಕ್ ಶಾಲೆಯ ಸುವರ್ಣ ಮಹೋತ್ಸವ ಹಾಗೂ ವಿಜ್ಞಾನ ಕಾಲೇಜಿನ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲೆಯ ಮೂರನೇ ತರಗತಿ ಮಕ್ಕಳು ಪ್ಲಾಸ್ಟಿಕ್ ಮುಕ್ತ ಸಂದೇಶ ಹಾಡಿಗೆ ಹೆಜ್ಜೆ ಹಾಕುವ ಮೂಲಕ ದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಎಂದು ಸಂದೇಶ ಸಾರಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಪ್ಲಾಸ್ಟಿಕ್ ನಿಷೇಧ ಕಾಯ್ದೆಗೆ ಪುಟಾಣಿ ಮಕ್ಕಳು ಜೀವತುಂಬಿದರು. ಹಾಡಿಗೆ ಹೆಜ್ಜೆ ಹಾಕುತ್ತಾ ಅಭಿನಯದ ಮೂಲಕ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಗೂ ಮನುಷ್ಯನ ಆರೋಗ್ಯದಲ್ಲಿ ಉಂಟಾಗುವ ದುಷ್ಪರಿಣಾಮ ಕುರಿತು ಜನರಿಗೆ ತಿಳಿಸಿದರು.