ಕಲಬುರಗಿ: ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ನಿರಂತರವಾಗಿರಬೇಕು ಎಂದು ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ಕರೆ ನೀಡಿದರು.
ಬಿಸಿಲೂರಲ್ಲಿ ಸಸಿ ನೆಟ್ಟ ಪರಿಸರ ಪ್ರೇಮಿಗಳು - Kalburgi
ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಕಲಬುರಗಿ ನಗರದ ಪರಿಸರ ಪ್ರೇಮಿಗಳು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ರು.
ನಗರದ ಮಹಾತ್ಮ ಬಸವೇಶ್ವರ ಕಾಲೋನಿಯಲ್ಲಿ ಪರಿಸರ ಪ್ರೇಮಿ ಮಂಜುನಾಥ ಎಸ್.ಕಳಸ್ಕರ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಯುವ ಮುಖಂಡ ಚಂದು ಪಾಟೀಲ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಾವು ಪರಿಸರದ ಅಗತ್ಯತೆ, ಕಾಳಜಿ, ಅರಿವು ಹೊಂದಿರುವುದರ ಜತೆಗೆ, ಪರಿಸರಕ್ಕೆ ನೀಡುತ್ತಿರುವ ಕೊಡುಗೆ ಏನು ಎಂಬುದನ್ನು ಮನವರಿಕೆ ಮಾಡಿಕೊಂಡು ಪರಿಸರದ ಉಳಿವಿಗಾಗಿ ಜಾಗೃತರಾಗಬೇಕು ಎಂದರು. ಸಸಿಗಳನ್ನು ನೆಟ್ಟು ಅವುಗಳನ್ನು ಉಳಿಸಿ ಬೆಳೆಸಲು ಸಂಕಲ್ಪ ತೊಡುವಂತೆ ಪಾಟೀಲ್ ಕರೆಕೊಟ್ಟರು.
ಈ ಸಂದರ್ಭದಲ್ಲಿ ಸಂಗಮನಾಥ ಎಸ್. ಸುರೇಶ ಸಾಲುಕ್ಕಿ, ಸಂತೋಷ ಹುಡಗಿ, ಅರವಿಂದ ಪೊದ್ದಾರ, ಲಿಂಗರಾಜ ಬಿರಾದಾರ, ಕಲ್ಯಾಣರಾವ್ ಶಿಲವಂತ, ಪ್ರಭಾವತಿ ದೊಡ್ಡಮನಿ, ನಾಗಣ್ಣ ಕುಸನೂರ, ಬಸವರಾಜ ಪಡ್ಡಿ, ಸಿದ್ದರಾಜ ಬಿರಾದಾರ, ಬಸವರಾಜ ರಾಠೋಡ, ಶರಣು ಹೆರೂರ, ಗುಂಡು ಐನಾಪುರ, ಮಾಣಿಕ ಪವಾರ, ಪವನ ತಂಬುರಿ ಸೇರಿದಂತೆ ಇತರರು ಹಾಜರಿದ್ರು.
TAGGED:
Kalburgi