ಕರ್ನಾಟಕ

karnataka

ETV Bharat / state

ಕಲಬುರಗಿ ಜನರಿಗೆ ಎಸ್​ಪಿ ಖಡಕ್​ ಎಚ್ಚರಿಕೆ... ಲಾಕ್​​ಡೌನ್ ಉಲ್ಲಂಘಿಸಿದ್ರೆ‌ ರೌಡಿ ಶೀಟರ್​​ ಪಟ್ಟಿಗೆ ಸೇರಿಸೋದಾಗಿ ವಾರ್ನಿಂಗ್​​! - Rowdy Sheetter list

ಕಲಬುರಗಿಯಲ್ಲಿ ಲಾಕ್‌ಡೌನ್ ಉಲ್ಲಂಘನೆ ಮಾಡುವ ಜನರನ್ನು, ರೌಡಿಶೀಟರ್​​ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಎಸ್​ಪಿ ಯಡಾ ಮಾರ್ಟಿನ್​​​ ಮಾರ್ಬನ್ಯಾಂಗ್ ಖಡಕ್​ ಎಚ್ಚರಿಕೆ​​ ನೀಡಿದ್ದಾರೆ.

ಎಸ್​ಪಿ ಯಡಾ ಮಾರ್ಟಿನ್​​​ ಮಾರ್ಬನ್ಯಾಂಗ್​​
ಎಸ್​ಪಿ ಯಡಾ ಮಾರ್ಟಿನ್​​​ ಮಾರ್ಬನ್ಯಾಂಗ್​​

By

Published : Apr 19, 2020, 5:02 PM IST

ಕಲಬುರಗಿ: ಜಿಲ್ಲೆಯಲ್ಲಿ ಲಾಕ್​ಡೌನ್​​ ನಿಯಮ ಉಲ್ಲಂಘನೆ ಮಾಡುವವರನ್ನು, ರೌಡಿ ಶೀಟರ್​​ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಎಸ್​ಪಿ ಯಡಾ ಮಾರ್ಟಿನ್​​​ ಮಾರ್ಬನ್ಯಾಂಗ್​​ ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ.

ಕಲಬುರಗಿಯಲ್ಲಿ ಇದುವರೆಗೆ ಕೊರೊನಾ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ, 118 ಜನರನ್ನು ರೌಡಿ ಶೀಟರ್ ಪಟ್ಟಿಗೆ ಜಿಲ್ಲಾ ಪೊಲೀಸ್ ಇಲಾಖೆ ಸೇರಿಸಿದೆ.

ಪತ್ರಿಕಾ ಪ್ರಕಟಣೆ

ಅಲ್ಲದೇ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಇಲ್ಲಿವರೆಗೆ 38 ಲಾಕ್‌ಡೌನ್ ಉಲ್ಲಂಘನೆ ಪ್ರಕರಣ ದಾಖಲಾಗಿವೆ. ಇದಕ್ಕೆ ಸಂಬಂಧಿಸಿದ 122 ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್​​ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.

ಲಾಕ್‌ಡೌನ್ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗೆ ಇಳಿದಿದ್ದ 659 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೇ 92,700 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಎಸ್​​ಪಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details