ಕಲಬುರ್ಗಿ:ಜಿಲ್ಲೆಯ ಚಿಂಚೋಳಿ ತಾಲೂಕಿನ ಹಲವೆಡೆ ಧಾರಾಕಾರ ಮಳೆ ಸುರಿದಿದೆ.ಮಳೆಗಾಗಿ ಪಸ್ತಪುರ, ಯಾಕಾಪುರ, ಯಲಕಪಳ್ಳಿ ಮುಂತಾದ ಕಡೆ ಹಲವು ಪೂಜಾ ಕಾರ್ಯಕ್ರಮಗಳನ್ನ ನೆರವೇರಿಸಲಾಗಿತ್ತು.
ಜನರ ಪೂಜೆಗೆ ಒಲಿದ ವರುಣ... ಚಿಂಚೋಳಿ ತಾಲೂಕಿನ ಹಲವೆಡೆ ಭಾರೀ ಮಳೆ - undefined
ಬಿಸಿಲುನಾಡು ಕಲಬುರ್ಗಿಯ ಜನ ಮಳೆಗಾಗಿ ಭಜನೆ, ಜಪ, ಮಂಗಳಾರತಿ ಮುಂತಾದ ಕಾರ್ಯಗಳನ್ನು ಮಾಡಿದ್ದು, ಜನರ ಪ್ರಾರ್ಥನೆಗೆ ವರುಣರ ಭುವಿಗೆ ಆಗಮಿಸಿದ್ದಾನೆ.
ಮಳೆಯಲ್ಲಿ ಮಿಂದೆದ್ದ ಜನಸಾಗರ
ಪಸ್ತಪುರ ಗ್ರಾಮದ ರಾಮಲಿಂಗೇಶ್ವರ ದೇವಾಲಯದಲ್ಲಿ ಭಜನೆ ಹಾಗೂ ಮಂಗಳಾರತಿ ಮತ್ತು ಪಂಚಾಕ್ಷರಿ ಮಂತ್ರ ಜಪಿಸಿದ್ದ ಜನರು, ಒಂದೂವರೆ ಕಿ.ಮಿ ಅಂತರದಲ್ಲಿರುವ ವೀರಭದ್ರೇಶ್ವರ ದೇವಾಲಯಕ್ಕೆ ತೆರಳಿ ದೇವರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಪೂರೈಸಿದ್ದರು.
ಪೂಜೆಗೆ ಮೆಚ್ಚಿದೆ ಎನ್ನುವ ರೀತಿಯಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಮಳೆ ನಿಂತ ಮೇಲೆ ಸಹಪಂಕ್ತಿಯಲ್ಲಿ ಭೋಜನ ಸೇವಿಸಿದ ಜನರು, ಗ್ರಾಮಕ್ಕೆ ವಾಪಸ್ಸಾಗಿದ್ದಾರೆ.