ಕರ್ನಾಟಕ

karnataka

ETV Bharat / state

ಇಂಧನ ಬೆಲೆ ಏರಿಕೆ​​: ಸರ್ಕಾರಿ ಬಸ್​​ಗಳ ಮೊರೆ ಹೋದ ಜನರು - government transport

ಮೊದಲೆಲ್ಲ ನಗರ ಹಾಗೂ ಗ್ರಾಮೀಣ ಸಾರಿಗೆ ಬಸ್​ಗಳು ಖಾಲಿ ಖಾಲಿ ಓಡಾಡುತ್ತಿದ್ದವು. ಆದ್ರೀಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಾರ್ವಜನಿಕರ ದೈನಂದಿನ ಬದುಕನ್ನೇ ಬದಲಾಯಿಸಿಬಿಟ್ಟಿದೆ. ಬೈಕ್, ಕಾರು ತೆಗೆದುಕೊಂಡು ಸಂಚರಿಸುತ್ತಿದ್ದ ಜನರೀಗ ನಗರ ಹಾಗೂ ಗ್ರಾಮೀಣ ಬಸ್​​ಗಳಿಗೆ ಮೊರೆ ಹೋಗಿದ್ದಾರೆ.

people are using government transport due to effects of fuel rate
ಇಂಧನ ಬೆಲೆ ಏರಿಕೆ​​: ಬಸ್​​ಗಳಿಗೆ ಮೊರೆ ಹೋದ ಜನರು!

By

Published : Mar 9, 2021, 4:41 PM IST

ಕಳೆದ ವರ್ಷಾರಂಭದಲ್ಲಿ ದೇಶಕ್ಕೆ ವಕ್ಕರಿಸಿದ ಮಹಾಮಾರಿ ಕೊರೊನಾಗೆ ಹೆದರಿದ ಜನರು ಸ್ವತಃ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಪಾರಂಭಿಸಿದರು. ಸೋಂಕು ಹರಡುವ ಭೀತಿಯಲ್ಲಿ ಬಸ್​​ಗಳಲ್ಲಿ ಸಂಚರಿಸುವುದನ್ನೇ ನಿಲ್ಲಿಸಿದ್ದರು. ಆದ್ರೀಗ ಇಂಧನ ಬೆಲೆ ಹೊಡೆತಕ್ಕೆ ತತ್ತರಿಸಿರುವ ಜನತೆ ನಗರ ಹಾಗು ಗ್ರಾಮೀಣ ಸಾರಿಗೆ ಬಸ್​​ನತ್ತ ಮುಖ ಮಾಡಿದ್ದಾರೆ.

ದಿನೇದಿನೆ ಏರಿಕೆ ಕಾಣುತ್ತಿರುವ ಇಂಧನ ಬೆಲೆ ಸಾಮಾನ್ಯ ಜನರ ಮೇಲೆ ಭಾರಿ ಪರಿಣಾಮ ಬೀರಿದೆ. ಸೋಂಕು ತಗುಲುವ ಭಯದಿಂದ ಬಸ್​ ಹತ್ತಲು ಯೋಚಿಸುತ್ತಿದ್ದ ಅದೇ ಜನರೀಗ ಇಂಧನ ಬೆಲೆಗೆ ಹೆದರಿ ಸ್ವಂತ ವಾಹನದಲ್ಲಿ ಸಂಚರಿಸಲು ಯೋಚಿಸುವಂತಾಗಿದೆ.

ಇಂಧನ ಬೆಲೆ ಏರಿಕೆ​​: ಬಸ್​​ಗಳಿಗೆ ಮೊರೆ ಹೋದ ಜನರು!

ಹುಬ್ಬಳ್ಳಿ-ಧಾರವಾಡ ಮಹಾ ನಗರಗಳಲ್ಲಿ ಈಗಾಗಲೇ ನಗರ ಸಾರಿಗೆ ವಿಭಾಗದಲ್ಲಿ ಪ್ರಯಾಣಿಕರ ಸಂಖ್ಯೆ ಲಕ್ಷಕ್ಕೆ ತಲುಪಿದ್ದು, 185 ಬಸ್​​​​ಗಳು ಕಾರ್ಯನಿರ್ವಹಿಸುತ್ತಿವೆ. ಜನರು ತಮ್ಮ ವಾಹನಗಳನ್ನು ಮನೆಯಲ್ಲಿಯೇ ಬಿಟ್ಟು ಸಾರಿಗೆ ಸಂಸ್ಥೆ ವಾಹನಗಳ‌ ಮೊರೆ ಹೋಗಿರುವುದರಿಂದ ಸಾರಿಗೆ ಸಂಸ್ಥೆಯ ಉದ್ಯೋಗ ಹೆಚ್ಚಿದೆ.

ಕಲಬುರಗಿಯಲ್ಲಿ ಒಂದೊಂದು ಬಸ್ ನಿತ್ಯ ನಗರದಾದ್ಯಂತ ಸರಿಸುಮಾರು 8 ರಿಂದ 9 ಟ್ರಿಪ್​ನಂತೆ 250 ರಿಂದ 300 ಕಿಲೋ ಮೀಟರ್ ಸಂಚಾರ ನಡೆಸುತ್ತಿವೆ. ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು ಬಸ್​​​ನಲ್ಲಿ ಸಂಚರಿಸುವುದು ಕೊಂಚ ಕಷ್ಟ ಎನಿಸುತ್ತಿದೆ. ಹಾಗಾಗಿ ಸರ್ಕಾರ ಇಂಧನ ಬೆಲೆ ಕಡಿಮೆ ಮಾಡುವುದರ ಮೂಲಕ ಸ್ವಂತ ವಾಹನ ಉಪಯೋಗಿಸಲು ಅನುವು ಮಾಡಿಕೊಡುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

ಕೋವಿಡ್​ನಿಂದ ಚೇತರಿಸಿಕೊಳ್ಳತ್ತಿದ್ದ ಜನರಿಗೆ ಇಂಧನ ಬೆಲೆ ಏರಿಕೆ ಹೊಡೆತ ಕೊಟ್ಟಿರುವುದಂತೂ ಮಾತ್ರ ಸುಳ್ಳಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದ್ದು, ಸ್ವಂತ ವಾಹನಗಳ ಬಳಕೆ ಕಡಿಮೆಯಾಗಿದೆ. ನಗರ ಹಾಗೂ ಗ್ರಾಮೀಣ ಸಾರಿಗೆಯತ್ತ ಮುಖಮಾಡಿದ್ದಾರೆ.

ABOUT THE AUTHOR

...view details