ಕರ್ನಾಟಕ

karnataka

ETV Bharat / state

ಕೊರೊನಾದಿಂದ ಪಾರಾಗಲು ಚೌಡೇಶ್ವರಿಯ ಮೊರೆ ಹೋದ ಕಲಬುರಗಿ ಜನತೆ

ಇಡೀ ವಿಶ್ವವೇ ಕೊರೊನಾ ವೈರಸ್​ ವಿರುದ್ಧ ಹೋರಾಡುತ್ತಿದೆ. ಈ ನಡುವೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಜನತೆ, ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೇರವೇರಿಸಿ ಮಾರಕ ವೈರಸ್​ನಿಂದ ಕಾಪಾಡು ದೇವರೇ ಎಂದು ಪ್ರಾರ್ಥನೆ ಮಾಡಿದ್ದಾರೆ.

People rushed to temple to fight against Corona Virus
ಚೌಡೇಶ್ವರಿ ಮೊರೆ ಹೋದ ಕಲಬುರಗಿ ಜನತೆ

By

Published : Mar 28, 2020, 10:12 AM IST

ಕಲಬುರಗಿ:ಮಾರಕ ಕೊರೊನಾ ವೈರಸ್ ಮುಕ್ತಿಗಾಗಿ ಜಿಲ್ಲೆಯ ಜನತೆ ದೇವರ ಮೊರೆ ಹೋಗಿದ್ದಾರೆ.

ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶ್ಯಾಳ ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೇರವೇರಿಸಿದ ಜನತೆ, 201 ತೆಂಗಿನಕಾಯಿ ಒಡೆದು ಕಾಪಾಡು ದೇವರೇ ಎಂದು ಪ್ರಾರ್ಥನೆ ಮಾಡಿದ್ದಾರೆ.

ಚೌಡೇಶ್ವರಿ ಮೊರೆ ಹೋದ ಕಲಬುರಗಿ ಜನತೆ

ಜೆ.ಎಂ ಕೊರಬು ಫೌಂಡೇಶನ್​ನಿಂದ ಪೂಜೆ ಸಲ್ಲಿಸಿ ಇಡಗಾಯಿ ಅರ್ಪಿಸಲಾಯಿತು. ಇದಲ್ಲದೆ ಮಾಶ್ಯಾಳ ಗ್ರಾಮದಲ್ಲಿ 15000 ಕ್ಕೂ ಅಧಿಕ ಮಾಸ್ಕ್​ಗಳನ್ನು ಸಾರ್ವಜನಿಕರಿಗೆ ವಿತರಿಸಿ ಕೊರೊನಾ ಕುರಿತಾಗಿ ಜಾಗೃತಿ ಮೂಡಿಸಲಾಯ್ತು.

ಕೊರೊನಾ ಬಗ್ಗೆ ಮನೆ ಮನೆಗೆ ಕರಪತ್ರ ಹಂಚಿ ಮನೆಯಿಂದ ಹೊರಗೆ ಬಾರದೆ ಮಹಾಮಾರಿ ಕೊರೊನಾ ವೈರಸ್ ಹರಡದಂತೆ ತಡೆಯಲು ಮನವಿ ಮಾಡಿದರು.

ABOUT THE AUTHOR

...view details