ಕಲಬುರಗಿ:ಜಾತ್ರೆ ವೇಳೆ ಸಿಡಿಮದ್ದು ಸಿಡಿದು 20ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ನಡೆದಿದೆ. ಇದರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮರಗಮ್ಮ ದೇವಿ ಜಾತ್ರೆ ಹಾಗೂ ಈ ಹಿಂದೆ ಭಗ್ನವಾದ 15 ದೇವಿಗಳ ಮೂರ್ತಿ ಮರುಪ್ರತಿಷ್ಠಾಪನೆಯನ್ನು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಾತ್ರೆಯಲ್ಲಿ ಸಿಡಿಮದ್ದು ಸಿಡಿಸಿ ಸಂಭ್ರಮಿಸಲಾಗುತಿತ್ತು. ಆಕಾಶದತ್ತ ಮದ್ದು ಸಿಡಿಸಿದಾಗ ಬೆಂಕಿಯ ಕಿಡಿ ಪಕ್ಕದಲ್ಲಿಯೇ ಇದ್ದ ಅಧಿಕ ಪ್ರಮಾಣದ ಮದ್ದಿನ ಮೇಲೆ ಬಿದ್ದು ಅವಘಡ ನಡೆದಿದೆ.