ಕಲಬುರಗಿ :ಶಿವಲಿಂಗಮ್ಮ ಎಂಬ ಮಹಿಳೆ ಕಳೆದ ಒಂದು ವರ್ಷದಿಂದ ಅನುಕಂಪದ ನೌಕರಿಗಾಗಿ ಕಚೇರಿಗಳಿಗೆ ಅಲೆಯುತ್ತಿದ್ದರು. ಆದ್ರೆ, ಜಿಲ್ಲೆಯ ಜಿಲ್ಲಾಧಿಕಾರಿ ಅವರಿಗೆ ಎರಡೇ ದಿನದಲ್ಲಿ ನೌಕರಿ ಸಿಗುವಂತೆ ಮಾಡಿದ್ದಾರೆ.
ಜ.25ರಂದು ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಕೊಂಡ ಯಶ್ವಂತ ಗುರುಕರ್ ಅವರನ್ನು ಭೇಟಿಯಾಗಲು ಶಿವಲಿಂಗಮ್ಮ ತನ್ನ ಇಬ್ಬರು ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಹೊರಗಡೆ ಕುಳಿತಿದ್ದರು.
ಅಧಿಕಾರ ವಹಿಸಿಕೊಂಡು ಡಿಸಿ ಗುರುಕರ್ ಹೊರ ಹೋಗುತ್ತಿದ್ದಾಗ, ಮಹಿಳೆ ಕುಳಿತಿದ್ದನ್ನ ಕಂಡು ಶಿವಲಿಂಗಮ್ಮಳ ಬಳಿಗೆ ತೆರಳಿ ಏನು ಸಮಸ್ಯೆ, ಯಾಕೆ ಇಲ್ಲಿಗೆ ಬಂದಿದ್ದೀರಿ ಅಂತಾ ಕೇಳಿದ್ದಾರೆ.
ಮಹಿಳೆಯ ಅಹವಾಲು ಆಲಿಸಿದ ಡಿಸಿ ಸ್ಥಳದಲ್ಲಿಯೇ ಎರಡು ದಿನದಲ್ಲಿ ನಿಮಗೆ ನೌಕರಿ ಸಿಗುತ್ತೆ, ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿ ಸಸ್ಪೆಂಡ್ ಆಗ್ತಾರೆ ಎಂದು ಭರವಸೆ ನೀಡಿದ್ದರು. ಅದರಂತೆ ಕೇವಲ ಎರಡೇ ದಿನದಲ್ಲಿ ಶಿವಲಿಂಗಮ್ಮ ಅವರಿಗೆ ಅನುಕಂಪದ ನೌಕರಿ ಸಿಕ್ಕಿದೆ.