ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಕಲ್ಲಿನ ಬಸವನಿಗೆ ಹಾಲು ಕುಡಿಸಲು ಮುಗಿಬಿದ್ದ ಜನ.. ಕ್ಷೀರ ಸೇವಿಸಿದನಾ ಬಸವಣ್ಣ!?

ಕಲಬುರಗಿ ನಗರದ ಬ್ಯಾಂಕ್ ಕಾಲೋನಿಯ ಜನರು ಈಶ್ವರ್ ದೇವಸ್ಥಾನದಲ್ಲಿನ ಕಲ್ಲಿನ ಬಸವಣ್ಣನಿಗೆ ಹಾಲು ಕುಡಿಸಿದ್ದಾರಂತೆ. ಇಂತಹದ್ದೊಂದು ಸುದ್ದಿ ಇಂದು ಸದ್ದು ಮಾಡ್ತಿದೆ.

people-feed-milk-to-stone-basava-in-kalaburagi
ಕಲ್ಲಿನ ಬಸವನಿಗೆ ಹಾಲೆರೆದ ಜನ

By

Published : Mar 6, 2022, 9:20 PM IST

ಕಲಬುರಗಿ: ಕಲ್ಲಿನ ಬಸವ ಹಾಲು ಕುಡಿಯುತ್ತಿದೆ ಎಂದು ಇಡೀ ಬಡಾವಣೆಯ ಮಹಿಳೆಯರು ಬಸವನಿಗೆ ಹಾಲು ಕುಡಿಸಲು ಸಾಲುಗಟ್ಟಿ ನಿಂತ ಘಟನೆ ನಗರದಲ್ಲಿ ನಡೆದಿದೆ.

ಕಲ್ಲಿನ ಬಸವನಿಗೆ ಹಾಲು ಕುಡಿಸಿ ಜನ

ಮಹಾರಾಷ್ಟ್ರದ ಲಾತೂರ್​ನಲ್ಲಿರುವ ಸಂಬಂಧಿಕರು ಕಲ್ಲಿನ ಬಸವ ಹಾಲು ಕುಡಿದಿದ್ದಾನೆ. ನೀವು ಕುಡಿಸಿ ನೋಡಿ ಅಂತಾ ಹೇಳಿದಕ್ಕೆ ಕಲಬುರಗಿಯ ಬ್ಯಾಂಕ್ ಕಾಲೋನಿಯ ಜನರು ಈಶ್ವರ್ ದೇವಸ್ಥಾನದಲ್ಲಿನ ಕಲ್ಲಿನ ಬಸವಣ್ಣನಿಗೆ ಹಾಲು ಕುಡಿಸಿದ್ದಾರಂತೆ.

ಶನಿವಾರ ರಾತ್ರಿ 10:30 ರ ಸುಮಾರಿಗೆ ಸಂಬಂಧಿಕರು ಕಾಲ್ ಮಾಡಿ ಹೇಳಿದ ತಕ್ಷಣ ದೇವಸ್ಥಾನಕ್ಕೆ ಬಂದು ಹಾಲು ಕುಡಿಸಿದಾಗ ಬಸವಣ್ಣ ಹಾಲು ಕುಡಿದಿದ್ದಾನೆ. ನಾವು ನಮ್ಮ ಕೈಯಾರೆ ಕುಡಿಸಿದ್ದೇವೆ. ಹಾಲು ಕುಡಿಯೋದನ್ನ ಕಣ್ಣಾರೆ ನೋಡಿದ್ದೇವೆ ಅಂತಾ ಮಹಿಳೆಯರು ಹೇಳುತ್ತಿದ್ದಾರೆ.

ಕಲ್ಲಿನ ಬಸವ ಹಾಲು ಕುಡಿದಿದ್ದಾನೆ ಅನ್ನೋ ವಿಚಾರ ತಿಳಿಯುತ್ತಿದ್ದಂತೆ ಇಡೀ ಏರಿಯಾದ ಜನರು ದೇವಸ್ಥಾನಕ್ಕೆ ಭೇಟಿ ಕೊಟ್ಟು ನಂದಿ ಬಸವನಿಗೆ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿ ಭಜನೆ ಮಾಡಿದ್ದಾರೆ.

ಬೆಳಗ್ಗೆ ಹಾಲು ಕುಡಿಸೋಕೆ ಹೋದರೆ ಬಸವಣ್ಣ ಕುಡಿದಿಲ್ಲ. ಆದ್ರೆ, ರಾತ್ರಿ ನಮ್ಮ ಕೈಯಾರೆ ನಾವು ಕುಡಿಸಿದಾಗ ಬಸವಣ್ಣ ಕುಡಿದಿದ್ದಾನೆ. ಇದು ಪವಾಡ ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಓದಿ:ಯಾದಗಿರಿ ಸಿಲಿಂಡರ್​ ಸ್ಫೋಟ ಪ್ರಕರಣ: ಮತ್ತಿಬ್ಬರು ಸಾವು, ಮೃತರ ಸಂಖ್ಯೆ 15ಕ್ಕೆ ಏರಿಕೆ

ABOUT THE AUTHOR

...view details