ಕರ್ನಾಟಕ

karnataka

ETV Bharat / state

ಹಿಜಾಬ್ ವಿಚಾರ ವಿಪರೀತಕ್ಕೆ ಹೋಗಬಾರದು, ಭಿನ್ನಾಭಿಪ್ರಾಯ ಬಿಟ್ಟು ಎಲ್ಲರೂ ಸೇರಿ ಹೋಗಬೇಕು‌: ಪೇಜಾವರ ಶ್ರೀ ಕರೆ

ಹಿಜಾಬ್ ವಿಚಾರ ವಿಪರೀತಕ್ಕೆ ಹೋಗಬಾರದು. ಭಿನ್ನಾಭಿಪ್ರಾಯ ಬಿಟ್ಟು ಎಲ್ಲರೂ ಇಂತಹ ವಿಚಾರಗಳನ್ನು ಇತ್ಯರ್ಥ ಮಾಡಬೇಕು. ಕೋರ್ಟ್ ವಸ್ತ್ರಸಂಹಿತೆ ವಿಚಾರದಲ್ಲಿ ಮಾತ್ರ ಮಧ್ಯಂತರ ಮೌಖಿಕ ಆದೇಶ ನೀಡಿದೆ. ಅದನ್ನು ಎಲ್ಲರೂ ಪಾಲಿಸಿಕೊಂಡು ಹೋಗುವುದು ಉತ್ತಮ....

pejawar_swamiji
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ‌ಸ್ವಾಮೀಜಿ

By

Published : Feb 16, 2022, 10:57 PM IST

ಕಲಬುರಗಿ: ಕೇಂದ್ರ ಸರ್ಕಾರ ಹತ್ತು ಶೇಕಡಾ ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿದೆ. ಆದರೆ, ರಾಜ್ಯದಲ್ಲಿ ಇದೂವರಗೆ ಅದು ಜಾರಿಯಾಗಿಲ್ಲ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ‌ಸ್ವಾಮೀಜಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ‌ಸ್ವಾಮೀಜಿ

ಕಲಬುರಗಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ರಾಜ್ಯದಲ್ಲಿ ಕೇಂದ್ರ ಸರ್ಕಾರದ ಹತ್ತು ಶೇಕಡಾ ಮೀಸಲಾತಿ ಜಾರಿಯಾಗಿಲ್ಲ ಹೀಗಾಗಿ ಶಿಕ್ಷಣ ಸೇರಿದಂತೆ ಅನೇಕ ಕಡೆ ಹಿನ್ನಡೆಯಾಗುತ್ತಿದೆ. ಗದಗದ ಓರ್ವ ವಿದ್ಯಾರ್ಥಿ ಪ್ರಥಮ ರ್ಯಾಂಕ್ ಪಡೆದರೂ ಗದಗದ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಇದು ವ್ಯವಸ್ಥೆಗೆ ಬಂದ ಅಪಕೀರ್ತಿ. ಕೇಂದ್ರ ಸರ್ಕಾರ ಕೊಟ್ಟಿರುವ ಮೀಸಲಾತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು ಎಂದು ವಿಶ್ವಪ್ರಸನ್ನ ತೀರ್ಥ ‌ಸ್ವಾಮೀಜಿ ಒತ್ತಾಯಿಸಿದರು.

ಹಿಜಾಬ್ ವಿಚಾರ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಕುರಿತಾಗಿ ಮಾತನಾಡಿದ ಶ್ರೀಗಳು, ಪ್ರಕರಣ ಕೋರ್ಟ್​ನಲ್ಲಿ ಇದೆ. ಹೀಗಾಗಿ ಅದರ ಬಗ್ಗೆ ಮಾತನಾಡಲ್ಲ, ಹಿಜಾಬ್ ವಿಚಾರ ವಿಪರೀತಕ್ಕೆ ಹೋಗಬಾರದು. ಭಿನ್ನಾಭಿಪ್ರಾಯ ಬಿಟ್ಟು ಎಲ್ಲರು ಸೇರಿ ಹೋಗಬೇಕು‌.

ನ್ಯಾಯಾಲಯದ ತೀರ್ಪುನ್ನು ಯಾರು ಉಲ್ಲಂಘಿಸಬಾರದು ವಿವಾದ ಆರಂಭವಾದ ಶಾಲೆಗಳಲ್ಲಿ ಇತ್ತೀಚಿನಿಂದ ಹಿಜಾಬ್ ಧರಿಸಿಕೊಂಡು ಬರ್ತಿದ್ದಾರೆ ಅನ್ನೋದು ನಮ್ಮ ಗಮನಕ್ಕೆ ಬಂದಿದೆ. ಕೋರ್ಟ್ ವಸ್ತ್ರಸಂಹಿತೆ ವಿಚಾರದಲ್ಲಿ ಮಾತ್ರ ಮಧ್ಯಂತರ ಮೌಖಿಕ ಆದೇಶ ನೀಡಿದೆ. ಅದನ್ನು ಎಲ್ಲರೂ ಪಾಲಿಸಿಕೊಂಡು ಹೋಗಬೇಕು ಎಂದರು.

ಇದನ್ನೂ ಓದಿ:ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗಷ್ಟೇ ಅಲ್ಲ ಶಿಕ್ಷಕರು, ಅಡುಗೆ ಸಿಬ್ಬಂದಿ, ಎಸ್​​​​​ಡಿಎಂಸಿ ಸದಸ್ಯರಿಗೂ ಇದೆ ಸಮವಸ್ತ್ರ!

For All Latest Updates

ABOUT THE AUTHOR

...view details