ಕಲಬುರಗಿ:ಬೆಂಗಳೂರಿನಿಂದ ರೈಲಿನ ಮೂಲಕ ಕಲಬುರಗಿಗೆ ಬಂದ ಪವಾರ್ ಕುಟುಂಬದ ಸದಸ್ಯರು ತಮ್ಮ ಗ್ರಾಮಕ್ಕೆ ತೆರಳಲಾಗದೇ ನಗರದ ಜಗತ್ ವೃತ್ತದ ನಡು ರೋಡಿನಲ್ಲಿ ಪರದಾಡಿದ ಪರಿಸ್ಥಿತಿ ಬಂದಿದೆ.
ಮನೆಗೆ ತೆರಳಲಾಗದೇ ರಸ್ತೆಯಲ್ಲೇ ಪರದಾಡಿದ ಪವಾರ್ ಕುಟುಂಬ ಸದಸ್ಯರು - Kalburgi news
ಶಿವಾಜಿ ಪವಾರ್ ಎಂಬುವವರು ಬೆಂಗಳೂರಿನಿಂದ ಕಲಬುರಗಿ ಬಂದು, ಜಿಲ್ಲೆಯ ಕಮಲಾಪುರ ತಾಲೂಕಿನ ಕವನಳ್ಳಿ ಗ್ರಾಮಕ್ಕೆ ತೆರಳಲು ಬಸ್ ಹಾಗೂ ವಾಹನ ಸೌಕರ್ಯ ಇಲ್ಲದೇ ನಡು ರಸ್ತೆಯಲ್ಲಿ ಕುಳಿತಿದ್ದಾರೆ.
ಶಿವಾಜಿ ಪವಾರ್ ಎಂಬುವವರು ಬೆಂಗಳೂರಿನಿಂದ ಕಲಬುರಗಿ ಬಂದು, ಜಿಲ್ಲೆಯ ಕಮಲಾಪುರ ತಾಲೂಕಿನ ಕವನಳ್ಳಿ ಗ್ರಾಮಕ್ಕೆ ತೆರಳಲು ಬಸ್ ಹಾಗೂ ವಾಹನ ಸೌಕರ್ಯ ಇಲ್ಲದೇ ನಡು ರಸ್ತೆಯಲ್ಲಿ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿ ತಮ್ಮ ಆಳಲನ್ನು ತೋಡಿಕೊಂಡ ಶಿವಾಜಿ ಪವಾರ, ಲಾಕ್ಡೌನ್ ಮಾಡಿದ್ದು ಸ್ವಾಗತಾರ್ಹ, ಆದರೆ ಮುಂಚೆಯೇ ಮಾಡಿದರೆ ನಮಗೆ ಚೆನ್ನಾಗಿ ಆಗ್ತಿತು. ಆದರೆ ಈಗ ಲಾಕ್ಡೌನ್ನಿಂದ ಮನೆಗೆ ಹೋಗಲು ಆಗುತ್ತಿಲ್ಲ. ಸಂಬಂಧಿಕರಿಗೆ ಕಲಬುರಗಿಗೆ ವಾಹನ ತರಲು ಹೇಳೀದ್ದೇವೆ, ಆದರೆ ಅವರು ಬರುವಾಗ ಮಧ್ಯದಲ್ಲಿ ಅವರನ್ನು ಸಹ ಪೋಲಿಸರು ತಡೆ ಹಿಡಿದರೆ ನಾವು ರಸ್ತೆಯ ಮಧ್ಯದಲ್ಲಿಯೇ ಇರಬೇಕಾಗುತ್ತದೆ ಎಂದರು.