ನಿಜಾಮುದ್ದೀನ್ ಸಭೆಯಲ್ಲಿ ಭಾಗಿಯಾದವರು ವರದಿ ಮಾಡದಿದ್ದಲ್ಲಿ ಕೇಸ್ ದಾಖಲಿಸಿ.. ಡಿಸಿಎಂ ಕಾರಜೋಳ - DCM Govinda Karajola's Latest News
ಕೊರೊನಾ ಕುರಿತಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಡಿಸಿಎಂ ಗೋವಿಂದ ಕಾರಜೋಳ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗಿಯಾದವರು ತಕ್ಷಣ ವರದಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅವರ ವಿರುದ್ದ ಕೇಸ್ ದಾಖಲಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಿಜಾಮುದ್ದೀನ್ ಸಭೆಗಯಲ್ಲಿ ಭಾಗಿಯಾದವರು ವರದಿ ಮಾಡದಿದ್ದಲ್ಲಿ ಕೇಸ್ ದಾಖಲಿಸಿ : ಡಿಸಿಎಂ
ಕಲಬುರಗಿ :ದೆಹಲಿ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿ ಬಂದವರು ತಾವಾಗಿಯೇ ವರದಿ ಮಾಡಿಕೊಂಡರೆ ಸರಿ, ಇಲ್ಲದಿದ್ದಲ್ಲಿ ಅವರ ಮೇಲೆ ಕೇಸ್ ದಾಖಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊರೊನಾ ಬಗ್ಗೆ ಸಭೆ ನಡೆಸಿದ ಡಿಸಿಎಂ ಗೋವಿಂದ ಕಾರಜೋಳ..
ಅನಾವಶ್ಯಕವಾಗಿ ರಸ್ತೆ ಮೇಲೆ ಓಡಾಡುವವರಿಗೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು. ಹೊಸದಾಗಿ ಬಂದ 18 ಸಾವಿರ ಜನರ ಪಡಿತರ ಅರ್ಜಿ ತಿರಸ್ಕರಿಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದ ಅವರು ಸದ್ಯ ತಾತ್ಕಾಲಿಕ ಪಡಿತರ ಚೀಟಿ ವಿತರಿಸಿ, ಎರಡು ತಿಂಗಳ ಕಾಲ ಧಾನ್ಯ ವಿತರಿಸಿ. ನಂತರ ಪರಿಶೀಲಿಸಿ ಬೇಕಿದ್ದರೆ ಪರ್ಮನೆಂಟ್ ಪಡಿತರ ಚೀಟಿ ವಿತರಿಸಿ ಎಂದು ಸಲಹೆ ನೀಡಿದರು. ಅಲೆಮಾರಿಗಳಿಗೆ ಊಟದ ಬದಲು ರೇಷನ್ ನೀಡಿ, ಯಾರೂ ಉಪವಾಸದಿಂದ ಉಳಿಯಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.