ಕಲಬುರಗಿ:ನನ್ನನ್ನೂ ಸೇರಿದಂತೆ ರಾಜ್ಯದಲ್ಲಿ ಹಲವು ಮುಖಂಡರು ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದೇವೆ ಎಂದು ಡಿಸಿಎಂ ಜಿ.ಪರಮೇಶ್ವರ ಹೇಳಿಕೆ ಕೊಟ್ಟಿದ್ದಾರೆ.
ನಾನು ಕೂಡ ಸಿಎಂ ರೇಸ್ನಲ್ಲಿದ್ದೇನೆ : ಡಾ.ಜಿ.ಪರಮೇಶ್ವರ್ ಹೊಸ ಬಾಂಬ್
ನನ್ನನ್ನು ಸೇರಿಸಿ ರಾಜ್ಯದಲ್ಲಿ ಹಲವು ಮುಖಂಡರು ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದೇವೆ ಎಂದು ಡಿಸಿಎಂ ಜಿ.ಪರಮೇಶ್ವರ ಹೇಳಿಕೆ ಕೊಟ್ಟಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಮುಖ್ಯಮಂತ್ರಿ ಇದ್ದಾರೆ. ಈಗ ಅದರ ಬಗ್ಗೆ ಮಾತನಾಡುವುದು ಅಪ್ರಸ್ತುತ, ಸಿಎಂ ಕುಮಾರಸ್ವಾಮಿ ಸಾಂದರ್ಭಿಕವಾಗಿ ಮಾತನಾಡಿದ್ದನ್ನು ಬೇರೆ ಅರ್ಥದಲ್ಲಿ ಕಲ್ಪಿಸಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಮುಖ್ಯಮಂತ್ರಿ ಇದ್ದಾರೆ. ಈಗ ಅದರ ಬಗ್ಗೆ ಮಾತನಾಡುವುದು ಅಪ್ರಸ್ತುತ, ಸಿಎಂ ಕುಮಾರಸ್ವಾಮಿ ಸಾಂದರ್ಭಿಕವಾಗಿ ಮಾತನಾಡಿದ್ದನ್ನು ಬೇರೆ ಅರ್ಥದಲ್ಲಿ ಕಲ್ಪಿಸಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ನಾಲ್ಕು ವರ್ಷ ಆದ ಮೇಲೆ ಚುನಾವಣಾ ಫಲಿತಾಂಶದ ನಂತರ ಸಿಎಂ ಯಾರೆಂದು ತಿರ್ಮಾನಿಸಿದರಾಯ್ತು ಎಂದರು.
ನಮ್ಮ ಜೊತೆಗಿದ್ದ ಉಮೇಶ್ ಜಾಧವ್ ಬಿಜೆಪಿಗೆ ಹೋಗಿದ್ದಾರೆ. ಈಗ ಅವರ ಮಗನನ್ನೇ ಉಪ ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ. ಇಂತಿಷ್ಟು ಹಣ ಕೊಡಬೇಕು, ಲೋಕಸಭೆ, ಉಪ ಚುನಾವಣೆ ಟಿಕೆಟ್ ನೀಡಬೇಕೆಂಬ ಪ್ಯಾಕೇಜ್ ಮಾಡಿಕೊಂಡು ಹೋಗಿದ್ದಾರೆ ಎಂದು ಡಿಸಿಎಂ ಪರಮೇಶ್ವರ್ ಇದೇ ವೇಳೆ ಆರೋಪಿಸಿದರು. ಇನ್ನು ಸಿದ್ದರಾಮಯ್ಯರ ಟ್ವೀಟ್ ವಿಷಯದ ಬಗ್ಗೆ ಮಾತನಾಡಿದ ಪರಮೇಶ್ವರ್, ರೇವಣ್ಣ ಮತ್ತು ಸಿದ್ಧರಾಮಯ್ಯ ಇಬ್ಬರು ಆತ್ಮೀಯರು ಹೀಗಾಗಿ ಟ್ವೀಟ್ ಮಾಡಿರಬೇಕು. ಅವರು ಸಾಂದರ್ಭಿಕವಾಗಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಇದರಿಂದ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದೂ ಮನವಿ ಮಾಡಿದರು.