ಕಲಬುರಗಿ:ಸಾಲಬಾಧೆ ತಾಳಲಾಗದೆ ಖಾಸಗಿ ಶಿಕ್ಷಣ ಸಂಸ್ಥೆ ಮಾಲೀಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ರಾಮಮಂದಿರ ಬಳಿಯಿರುವ ಮರಗಮ್ಮ ದೇವಸ್ಥಾನದ ಹತ್ತಿರ ನಡೆದಿದೆ.
ಓದಿ: ಮೀಸಲಾತಿ ಕುರಿತು ನ್ಯಾಯ ಒದಗಿಸುವ ಉದ್ದೇಶ ಸಿಎಂ ಅವರದ್ದು: ಬಸವರಾಜ ಬೊಮ್ಮಾಯಿ

ನಗರದ ವಿವೇಕಾನಂದ ನಗರದ ನಿವಾಸಿ ಶಂಕರ ಬಿರಾದಾರ (48) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಶಿಕ್ಷಣ ಸಂಸ್ಥೆಗಾಗಿ ಖಾಸಗಿ ವ್ಯಕ್ತಿಗಳ ಬಳಿ ಸಾಲ ಮಾಡಿದ್ದ. ಸಾಲಗಾರರ ಕಿರುಕುಳಕ್ಕೆ ಬೇಸತ್ತು ಶಂಕರ ಬಿರಾದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಾಮ ಮಂದಿರ ಬಳಿ ಇರುವ ಮರಗಮ್ಮ ದೇವಸ್ಥಾನದ ಹತ್ತಿರ ಶಂಕರ ಬಿರಾದಾರ ವಿಷ ಸೇವಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬಿರಾದಾರ ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಹೊಂದಿದ್ದರು.
ಈ ಸಂಬಂಧ ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.