ಕರ್ನಾಟಕ

karnataka

ETV Bharat / state

ಕಲಬುರಗಿ ಏರ್​ಪೋರ್ಟ್​ಗೆ ವರ್ಷದ ಸಂಭ್ರಮ: 4 ಜಿಲ್ಲೆಗಳನ್ನು ಹಿಂದಿಕ್ಕಿ ಉನ್ನತ ಸ್ಥಾನಕ್ಕೇರಿದ ವಿಮಾನಯಾನ

ಕಲಬುರಗಿ ವಿಮಾನ ನಿಲ್ದಾಣ ಆರಂಭಗೊಂಡ ಒಂದು ವರ್ಷದ ಅವಧಿಯಲ್ಲಿಯೇ 40 ಸಾವಿರ ಪ್ರಯಾಣಿಕರು ವಿಮಾನಯಾನದ ಪ್ರಯೋಜನ ಪಡೆದಿದ್ದು, ವಿಮಾನಯಾನದಲ್ಲಿ ನಿರೀಕ್ಷೆಗಿಂತ ಉತ್ತಮ ಸ್ಪಂದನೆ ದೊರೆತಿದ್ದು, ರಾಜ್ಯದ ನಾಲ್ಕು ಜಿಲ್ಲೆಗಳನ್ನು ಹಿಂದಿಕ್ಕಿ ಕಲಬುರಗಿ ವಿಮಾನಯಾನ ಉನ್ನತ ಸ್ಥಾನಕ್ಕೇರಿದೆ.

ಕಲಬುರಗಿ ಏರ್​ಪೋರ್ಟ್​ಗೆ ವರ್ಷದ ಸಂಭ್ರಮ
ಕಲಬುರಗಿ ಏರ್​ಪೋರ್ಟ್​ಗೆ ವರ್ಷದ ಸಂಭ್ರಮ

By

Published : Nov 27, 2020, 11:55 AM IST

ಕಲಬುರಗಿ: ಕಲ್ಯಾಣ ಕರ್ನಾಟಕ ಜನರ ಲೋಹದ ಹಕ್ಕಿ ಹಾರಾಟದ ದಶಕಗಳ ಕನಸು ಈಡೇರಿ ನವೆಂಬರ್ 22ಕ್ಕೆ ವರ್ಷ ತುಂಬಿದೆ. ವಿಮಾನಯಾನದಲ್ಲಿ ನಿರೀಕ್ಷೆಗಿಂತ ಉತ್ತಮ ಸ್ಪಂದನೆ ದೊರೆತಿದ್ದು ರಾಜ್ಯದ ನಾಲ್ಕು ಜಿಲ್ಲೆಗಳನ್ನು ಹಿಂದಿಕ್ಕಿ ಕಲಬುರಗಿ ವಿಮಾನಯಾನ ಉನ್ನತ ಸ್ಥಾನಕ್ಕೇರಿದೆ.

ಕಲಬುರಗಿ ವಿಮಾನ ನಿಲ್ದಾಣ ಆರಂಭಗೊಂಡ ಒಂದು ವರ್ಷದ ಅವಧಿಯಲ್ಲಿಯೇ 40 ಸಾವಿರ ಪ್ರಯಾಣಿಕರು ವಿಮಾನಯಾನದ ಪ್ರಯೋಜನ ಪಡೆದಿದ್ದಾರೆ. ಬೀದರ್, ಬಳ್ಳಾರಿ, ಹುಬ್ಬಳ್ಳಿ, ಮೈಸೂರು ನಾಲ್ಕು ಜಿಲ್ಲೆಗಳನ್ನು ಹಿಂದಿಕ್ಕಿ ಬೆಂಗಳೂರು, ಮಂಗಳೂರು, ಬೆಳಗಾವಿ ನಂತರ ಕಲಬುರಗಿ ವಿಮಾನ ನಿಲ್ದಾಣ ನಾಲ್ಕನೇ ಸ್ಥಾನ ಪಡೆದಿದೆ.

ಕಳೆದ 11 ತಿಂಗಳ ಅವಧಿಯಲ್ಲಿ 37,016 ಪ್ರಯಾಣಿಕರು ಕಲಬುರಗಿ ವಿಮಾನ ನಿಲ್ದಾಣ ಬಳಸಿಕೊಂಡಿದ್ದಾರೆ. ಸ್ಟಾರ್ ಏರ್ ಅಲಯನ್ಸ್ ಸಂಸ್ಥೆಯ ವಿಮಾನಗಳು 924 ಬಾರಿ ಇಲ್ಲಿಂದ ಹಾರಾಟ ಮಾಡಿವೆ. ಸದ್ಯ ಬೆಂಗಳೂರಿಗೆ ನಿತ್ಯ ಎರಡು ವಿಮಾನ, ವಾರದಲ್ಲಿ ಮೂರು ದಿನ ದೆಹಲಿಗೆ ವಿಮಾನ ಸೇವೆ ಲಭ್ಯವಿದೆ. ಈಗಾಗಲೇ ಹಬ್ಬದ ನಿಮಿತ್ತ ಎರಡು ದಿನ ಮುಂಬೈಗೆ ವಿಶೇಷ ವಿಮಾನಯಾನ ನಡೆಸಲಾಗಿದ್ದು, ಅದರಲ್ಲಿಯೂ ಯಶಸ್ಸು ಕಂಡಿದೆ.

ಇಲ್ಲಿನ ಜನರ ಪ್ರತಿಕ್ರಿಯೆ ನೋಡಿ ವಿಮಾನಯಾನ ಕಂಪನಿಗಳು ಬರುವ ದಿನಗಳಲ್ಲಿ ಮುಂಬೈ, ಹೈದರಾಬಾದ್, ತಿರುಪತಿ ಸೇರಿ ಪ್ರಮುಖ ನಗರಗಳಿಗೆ ವಿಮಾನ ಹಾರಾಟ ನಡೆಸಲು ಮುಂದೆ ಬರುತ್ತಿವೆ. ಅಲ್ಲದೇ ರಾತ್ರಿ ಸಮಯದಲ್ಲಿಯೂ ವಿಮಾನ ಹಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 2021 ಜುಲೈ ತಿಂಗಳಿಂದ ರಾತ್ರಿ ವಿಮಾನಯಾನ ಆರಂಭಿಸಲು ಚಿಂತನೆ ಸಹ ನಡೆಸಲಾಗಿದೆ. ಕಾರ್ಗೋ (ಸರಕು ಸಾಗಣೆ) ವಿಮಾನ ಹಾರಾಟ ಕೂಡ ಶುರುವಾಗುವ ಸಾಧ್ಯತೆ ಇದೆ.

ಮತ್ತೊಂದು ಸಂತಸದ ವಿಷಯ ಅಂದರೆ ಕಲಬುರಗಿಯಲ್ಲಿ ಪೈಲಟ್ ತರಬೇತಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಈ ಭಾಗದ ಯುವಕರಿಗೆ ಉದ್ಯೋಗ ಅವಕಾಶ ಹೆಚ್ಚಾಗುವ ನಿರೀಕ್ಷೆ ಇದೆ. ಇಂದಿರಾಗಾಂಧಿ ರಾಷ್ಟ್ರೀಯ ಉಡಾನ್​ ಅಕಾಡೆಮಿಯಿಂದ ಪೈಲಟ್ ತರಬೇತಿ ಕೇಂದ್ರ ಪ್ರಾರಂಭಿಸುತ್ತಿದ್ದು, ಇದಕ್ಕಾಗಿ ನಾಲ್ಕು ತರಬೇತಿ ವಿಮಾನಗಳು ಇಷ್ಟರಲ್ಲೇ ಕಲಬುರಗಿ ನಿಲ್ದಾಣಕ್ಕೆ ಬಂದಿಳಿಯಲಿವೆ.

ABOUT THE AUTHOR

...view details