ಕಲಬುರಗಿ:ಸಾರಿಗೆ ಬಸ್ ಹಾಗೂ ಟಂಟಂ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿ, ಎಂಟು ಜನರು ಗಂಭೀರ ಗಾಯಗೊಂಡ ಘಟನೆ ಚಿತ್ತಾಪುರ ತಾಲೂಕಿನ ರಾವೂರ ಬಳಿ ನಡೆದಿದೆ.
ಟಂಟಂ-ಬಸ್ ನಡುವೆ ಅಪಘಾತ: ಓರ್ವ ಸಾವು, 8 ಜನ ಗಂಭೀರ - Kalburagi accident news
ಚಿತ್ತಾಪುರ ತಾಲೂಕಿನ ರಾವೂರ ಬಳಿ ಟಂಟಂ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ್ದು, 8 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತ
ಚಿತ್ತಾಪುರ ತಾಲೂಕಿನ ಡೊಣಗಾಂವ ಗ್ರಾಮದ ನಿವಾಸಿ ಶರಣಪ್ಪ ಮಾಲಿ ಪಾಟೀಲ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಡೊಣಗಾಂವದಿಂದ ಟಂಟಂ ಜೇವರ್ಗಿ ತಾಲೂಕಿನ ನರಬೋಳಿಗೆ ಹೊರಟಿತ್ತು. ಜೇವರ್ಗಿಯಿಂದ ಬಸ್ ಚಿತ್ತಾಪುರಕ್ಕೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಚಿತ್ತಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.