ಕರ್ನಾಟಕ

karnataka

ETV Bharat / state

ವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯನಿಗೂ ತಗುಲಿತು ಕೊರೊನಾ: ಕಲಬುರಗಿ ಜಿಲ್ಲಾಧಿಕಾರಿ ಸ್ಪಷ್ಟನೆ - Kalburgi Corona vairus News

ಇತ್ತೀಚೆಗಷ್ಟೇ ಕೊರೊನಾ ಸೋಂಕಿನಿಂದ ಮೃತಪಟ್ಟ 63 ವರ್ಷದ ವೃದ್ದನಿಗೆ ಚಿಕಿತ್ಸೆ ನೀಡಿದ ವೈದ್ಯನಿಗೂ ಇದೀಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.

corona virus
ಕೊರೊನಾ ವೈರಸ್​

By

Published : Mar 17, 2020, 10:30 AM IST

ಕಲಬುರಗಿ :ರಾಜ್ಯದಲ್ಲಿ ಮತ್ತೊಂದು ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕಿಗೆ ಮೃತಪಟ್ಟ ವೃದ್ಧನ ಮನೆಗೆ ತೆರಳಿ ಚಿಕಿತ್ಸೆ ನೀಡಿದ್ದ ವೈದ್ಯನಿಗೆ ಕೊರೊನಾ ಸೋಂಕು ಬಾಧಿಸಿದೆ ಎಂದು ಜಿಲ್ಲಾಧಿಕಾರಿ ಬಿ. ಶರತ್ ತಿಳಿಸಿದ್ದಾರೆ.

ಕೊರೊನಾ ಸೊಂಕಿನಿಂದ ಮೃತಪಟ್ಟ ವೃದ್ಧನೊಂದಿಗೆ, ವೈದ್ಯ ನೇರ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಅವರನ್ನು ಹೋಮ್ ಐಸೋಲೇಷನ್​ನಲ್ಲಿ ಇಡಲಾಗಿತ್ತು. ಇದೀಗ ಅವರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ.

ಮಾರ್ಚ್ 10 ರಂದು ಮಾರಕ ಸೋಂಕಿಗೆ ವೃದ್ಧ ಬಲಿಯಾಗಿದ್ದ ವಿಚಾರ ದೇಶದಲ್ಲಿಯೇ ತೀವ್ರ ಆತಂಕ ಸೃಷ್ಟಿಸಿತ್ತು.

ಸದ್ಯ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೊರೊನಾಗೆ ಒಬ್ಬರು ಸಾವನ್ನಪ್ಪಿದ್ರೆ, ಇಬ್ಬರಿಗೆ ಸೋಂಕು ಬಾಧಿಸಿದೆ.

ABOUT THE AUTHOR

...view details