ಕರ್ನಾಟಕ

karnataka

ETV Bharat / state

ಚರಂಡಿ ಗಲಭೆ: ಮನೆಗೆ ನುಗ್ಗಿ ಥಳಿಸಿದ ಗುಂಪು.. ಯುವಕನ‌ ಕೊಲೆ, ಆರು ಜನರ ಸ್ಥಿತಿ ಗಂಭೀರ! - ಕಲಬುರಗಿಯಲ್ಲಿ ವ್ಯಕ್ತಿ ಹತ್ಯೆ ಮತ್ತು ಜನರಿಗೆ ಗಾಯ

ಚರಂಡಿ ವಿಷಯಕ್ಕೆ ನಡೆದ ಜಗಳದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದು, ಆರು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

Kalaburagi man murdered over clash for drainage issue, clash over drainage issue in Kalaburagi, man murder and people injured in Kalaburagi, Kalaburagi crime news, ಕಲಬುರಗಿಯಲ್ಲಿ ಚರಂಡಿ ವಿಚಾರಕ್ಕೆ ಗಲಭೆ, ಚರಂಡಿ ವಿಚಾರದ ಗಲಭೆಯಲ್ಲಿ ಕಲಬುರಗಿ ವ್ಯಕ್ತಿ ಕೊಲೆ, ಕಲಬುರಗಿಯಲ್ಲಿ ವ್ಯಕ್ತಿ ಹತ್ಯೆ ಮತ್ತು ಜನರಿಗೆ ಗಾಯ, ಕಲಬುರಗಿ ಅಪರಾಧ ಸುದ್ದಿ,
ಯುವಕನ‌ ಕೊಲೆ

By

Published : Jun 13, 2022, 12:42 PM IST

Updated : Jun 13, 2022, 3:30 PM IST

ಕಲಬುರಗಿ: ಚರಂಡಿ ವಿಷಯದಲ್ಲಿ ಆರಂಭಗೊಂಡ ಕ್ಷುಲಕ ಜಗಳದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಈ ಗಲಭೆಯಲ್ಲಿ ಆರು ಜನರು ಗಾಯಗೊಂಡಿರುವ ದಾರುಣ ಘಟನೆ ಚಿತ್ತಾಪುರ ತಾಲೂಕಿನ‌ ಮುಡಬೂಳ ಗ್ರಾಮದಲ್ಲಿ ನಡೆದಿದೆ.

ಗಲಭೆಯಲ್ಲಿ ಹಾನಿಗೊಳಗಾದ ಯುವಕನ ಮನೆಯ ಬಾಗಿಲು

ವಿಶ್ವನಾಥ ಸಂಗಾವಿ (32) ಕೊಲೆಯಾದ ಯುವಕ. ಮುಡಬೂಳ ಗ್ರಾಮದಲ್ಲಿ ಮನೆಯ ಎದುರಿನ ಚರಂಡಿ ವಿಷಯವಾಗಿ ನಿನ್ನೆ ಮಧ್ಯಾಹ್ನ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿತ್ತು‌. ಮತ್ತೆ ಅದೇ ವಿಷಯವಾಗಿ ರಾತ್ರಿಯೂ ಕೂಡಾ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದೆ. ಪರಿಣಾಮ ಕೆಲವರು ಸಂಗಾವಿ ಕುಟುಂಬದವರ ಮೇಲೆ ಮಾರಕಾಸ್ತ್ರ, ಕಲ್ಲು ಕಟ್ಟಿಗೆಯಿಂದ ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಉದ್ರಿಕ್ತ ಗುಂಪು ಸಂಗಾವಿ ಮನೆಯ ಬಾಗಿಲು ಕಲ್ಲುಗಳಿಂದ ಹೊಡೆದು ಮುರಿದು ಹಾಕಿದ್ದಾರೆ.

ವಿಶ್ವನಾಥ ಸಂಗಾವಿ ಕೊಲೆಯಾದ ಯುವಕ

ಓದಿ:ಸಲಿಂಗಕಾಮಿಗಳ ನಡುವೆ ಸೆಕ್ಸ್ ವಿಚಾರಕ್ಕೆ ಗಲಾಟೆ, ಕೊಲೆ: ಆಟೋ ಚಾಲಕನ ಬಂಧನ

ಘಟನೆಯಲ್ಲಿ ವಿಶ್ವನಾಥ ಸಂಗಾವಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಂಗಾವಿ ಮನೆತನದ ಆರು ಜನರು ಗಂಭೀರ ಗಾಯಗೊಂಡಿದ್ದು, ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮನೆಯ ತುಂಬೆಲ್ಲ ರಕ್ತದ ಹೊಳೆಯಂತೆ ಹರಿದಾಡಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲಿಸಿದ್ದಾರೆ. ಘಟನೆ ನಂತರ ದುಷ್ಕರ್ಮಿಗಳು ತೆಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಈ ಕುರಿತು ಚಿತ್ತಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jun 13, 2022, 3:30 PM IST

ABOUT THE AUTHOR

...view details