ಸೇಡಂ: ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ರಂಜೋಳ ಕ್ರಾಸ್ ಸಮೀಪ ಜರುಗಿದೆ.
ಭೀಕರ ರಸ್ತೆ ಅಪಘಾತ: ಓರ್ವ ಸಾವು - Road accident news
ಸೇಡಂ ತಾಲೂಕಿನ ರಂಜೋಳ ಕ್ರಾಸ್ ಸಮೀಪ ಬೈಕ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ.
Accident
ಸೇಡಂ ನಿವಾಸಿ ಇಬ್ರಾಹಿಂ ಮಹಮ್ಮದ್ ಹುಸೇನ್ (25) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಮತ್ತು ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿವೆ.
ಈ ಸಂಬಂಧ ಸ್ಥಳಕ್ಕೆ ಸಿಪಿಐ ರಾಜಶೇಖರ ಹಳಗೋದಿ, ಪಿಎಸ್ಐ ಸುಶೀಲ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Last Updated : Aug 9, 2020, 2:10 PM IST