ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಡಯಾಲಿಸಿಸ್ ಯಂತ್ರ ದಿಢೀರ್​ ಬಂದ್​: ಓರ್ವ ಸಾವು, ಮೂವರು ಗಂಭೀರ - ಜಿಲ್ಲಾಧಿಕಾರಿ

ಏಕಾಏಕಿ ಡಯಾಲಿಸಿಸ್ ಯೂನಿಟ್ ಬಂದಾಗಿ ಓರ್ವ ರೋಗಿ ಸಾವನ್ನಪ್ಪಿ, ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಡಯಾಲಸಿಸ್ ಯಂತ್ರ ದಿಢೀರ್​ ಬಂದ್​: ಓರ್ವ ಸಾವು, ಮೂವರ ಸ್ಥಿತಿ ಗಂಭೀರ

By

Published : Sep 12, 2019, 9:56 PM IST

Updated : Sep 12, 2019, 10:02 PM IST

ಕಲಬುರಗಿ: ಡಯಾಲಿಸಿಸ್ ಯಂತ್ರ ದಿಢೀರ್​ ಬಂದಾಗಿ ಓರ್ವ ರೋಗಿ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಡಯಾಲಸಿಸ್ ಯಂತ್ರ ದಿಢೀರ್​ ಬಂದ್​: ಓರ್ವ ಸಾವು, ಮೂವರ ಸ್ಥಿತಿ ಗಂಭೀರ

16 ವರ್ಷದ ಆಕಾಶ್ ಮೃತಪಟ್ಟ ರೋಗಿ. ಇನ್ನೂ ಮೂವರು ರೋಗಿಗಳ ಆರೋಗ್ಯ ಸ್ಥಿತಿಯೂ ಗಂಭೀರವಾಗಿದ್ದು ವಿಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

14 ಬೆಡ್​ಗಳನ್ನು ಹೊಂದಿರುವ ಡಯಾಲಿಸಿಸ್ ಯೂನಿಟ್​ನ ಎಲ್ಲಾ ರೋಗಿಗಳನ್ನು ವಿಮ್ಸ್‌ನ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಹಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಡಯಾಲಿಸಿಸ್ ಯೂನಿಟ್ ಕೆಟ್ಟದ್ದರಿಂದಾಗಿ ಈ ದುರ್ಘಟನೆ ಸಂಭವಿಸಿದೆ.

ಆಸ್ಪತ್ರೆಗೆ ಜಿಲ್ಲಾಧಿಕಾರಿ ಬಿ. ಶರತ್, ಡಿಎಚ್ಓ, ಜಿಲ್ಲಾಸ್ಪತ್ರೆಯ ಸರ್ಜನ್ ಹಾಗೂ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಇದ್ದಕ್ಕಿದ್ದಂತೆ ಡಯಾಲಿಸಿಸ್‌ ಯೂನಿಟ್ ಕೆಡಲು ಕಾರಣವೇನು? ಯಾರ ನಿರ್ಲಕ್ಷ್ಯದಿಂದಾಗಿ ಹೀಗಾಗಿದೆ? ಎಂಬುದರ ಕುರಿತು ಮಾಹಿತಿ ಕಲೆ ಹಾಕುತ್ತಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Last Updated : Sep 12, 2019, 10:02 PM IST

ABOUT THE AUTHOR

...view details