ಕಲಬುರ್ಗಿ:ಭೂಸ್ವಾಧೀನ ಕಾಯ್ದೆಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಪ್ರಾಂತ್ಯ ರೈತ ಸಂಘದ ವತಿಯಿಂದ ರೈತ ಸಮಾವೇಶ ಹಮ್ಮಿಕೊಂಡಿರುವುದಾಗಿ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ತಿಳಿಸಿದರು.
ಜು.7 ರಂದು ರೈತ ಸಮಾವೇಶ: ಮಾರುತಿ ಮಾನ್ಪಡೆ - undefined
ಭೂಸ್ವಾಧೀನ ಕಾಯ್ದೆಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಪ್ರಾಂತ್ಯ ರೈತ ಸಂಘದ ವತಿಯಿಂದ ಜು.7ರಂದು ರೈತ ಸಮಾವೇಶ ಹಮ್ಮಿಕೊಂಡಿರುವುದಾಗಿ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೊಟನೂರ್ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಭವನದಲ್ಲಿ ಜು.7 ರಂದು ರೈತ ಸಮಾವೇಶವನ್ನು ಏರ್ಪಡಿಸಲಾಗಿದ್ದು ಕಾರ್ಯಕ್ರಮವನ್ನು ನ್ಯಾಯಮೂರ್ತಿ ವಿ. ಗೋಪಾಲಗೌಡ ಉದ್ಘಾಟಿಸಲಿದ್ದು ಮಾಜಿ ಕಾರ್ಮಿಕ ಸಚಿವ ಎಸ್.ಕೆ ಕಾಂತಾ, ಯು.ಬಸವರಾಜ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಸಿಮೆಂಟ್ ಕಾರ್ಖಾನೆಗಳ ಮಾಲೀಕರು ಸರಕಾರದ ಜೊತೆ ಒಳ ಒಪ್ಪಂದ ಮಾಡಿಕೊಳ್ಳುವ ಮೂಲಕ ಸಾವಿರಾರು ಎಕರೆ ರೈತರ ಜಮೀನನ್ನು ಕಾನೂನು ಬಾಹಿರವಾಗಿ ಮಾರಾಟವಾಗಿರುವುದು ಕಣ್ಣೆದುರೆ ಇದೆ ಎಂದು ಆರೋಪಿಸಿದ ಮಾನ್ಪಡೆ ಇದನ್ನು ಖಂಡಿಸಿ ಕಂದಾಯ ಕಾನೂನು 109 ಎ ಅಡಿಯಲ್ಲಿ ರೈತರಿಂದ ಖರೀದಿಸಿದ ಭೂಮಿಗೆ ಪರಿಹಾರ ನೀಡಬೇಕು ಹಾಗೂ ಕಾನೂನು ಬಾಹಿರವಾಗಿ ಖರೀದಿಸಿದ ಭೂಮಿಯ ನೋಂದಣಿ ರದ್ದು ಪಡಿಸಬೇಕು ಹಾಗೂ ಕೂಡಲೇ ರಾಜ್ಯಸರಕಾರ ಭೂಸ್ವಾಧೀನ ಕಾಯಿದೆ -2019 ಹಿಂಪಡೆಯಬೇಕು ಎಂಬುದನ್ನು ಈ ಸಮಾವೇಶದ ಮೂಲಕ ಸರಕಾರಕ್ಕೆ ಆಗ್ರಹಿಸಲಾಗುವುದು ಎಂದು ಹೇಳಿದರು.