ಕಲಬುರಗಿ:ಕೊರೊನಾ ಸೋಂಕಿನಿಂದ ಕಲಬುರಗಿ ನಗರದ ಸಿಐಬಿ ಕಾಲೋನಿಯ 65 ವರ್ಷದ ವೃದ್ಧೆ ಸಾವನ್ನಪ್ಪಿದ್ದು, ಇದರೊಂದಿಗೆ ಸೋಂಕಿಗೆ ಮೃತಪಟ್ಟವರ ಸಂಖ್ಯೆ 259ಕ್ಕೆ ಏರಿಕೆಯಾಗಿದೆ.
ಕಲಬುರಗಿ: ಕೊರೊನಾಗೆ ಓರ್ವ ವೃದ್ಧೆ ಬಲಿ - ಕೊರೊನಾಗೆ ಓರ್ವ ವೃದ್ಧೆ ಬಲಿ
ಕಲಬುರಗಿ ಜಿಲ್ಲೆಯಲ್ಲಿ 151 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 15,730ಕ್ಕೆ ಏರಿಕೆಯಾಗಿದೆ.
ಕಲಬುರಗಿ
ಜಿಲ್ಲೆಯಲ್ಲಿ ಇಂದು 151 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 15,730ಕ್ಕೆ ಏರಿಕೆಯಾಗಿದೆ. ಇಂದು 115 ಜನ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು 13,042 ಜನ ಗುಣಮುಖರಾಗಿದ್ದಾರೆ. ಸದ್ಯ 2,429 ಆಕ್ಟಿವ್ ಪ್ರಕರಣಗಳಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.