ಕಲಬುರಗಿ:ಮಹಾಮಾರಿ ಕೊರೊನಾ ನಗರದಲ್ಲಿ ನಾಲ್ಕನೇ ವೃದ್ಧನನ್ನು ಬಲಿ ಪಡೆದಿದೆ. ಇಂದು ಮತ್ತೊಬ್ಬ ವೃದ್ಧ ಸಾವನ್ನಪ್ಪಿದ್ದರಿಂದ ಆತ ವಾಸವಾಗಿದ್ದ ಬಡಾವಣೆಯನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ.
ಕೊರೊನಾಗೆ ಕಲಬುರಗಿಯಲ್ಲಿ ಮತ್ತೊಂದು ಬಲಿ: ವೃದ್ಧ ವಾಸವಿದ್ದ ಬಡಾವಣೆ ಸೀಲ್ಡೌನ್ - ಕೊರೊನಾದಿಂದ ವೃದ್ಧ ಸಾವು
ವೃದ್ಧ ವಾಸವಿದ್ದ ಅಪ್ತ ಗುಂಬಜ್ ಏರಿಯಾವನ್ನು ಜಿಲ್ಲಾಡಳಿತ ಸೀಲ್ಡೌನ್ ಮಾಡಿದೆ. ಪೊಲೀಸರು ಬಡಾವಣೆಯ ರಸ್ತೆಗಳ ಮಧ್ಯೆ ಪೈಪ್ಗಳನ್ನು ಹಾಕಿ ಬಂದ್ ಮಾಡಿದ್ದಾರೆ. ಜನರು ಆ ಪ್ರದೇಶದತ್ತ ಸುಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಬಡಾವಣೆ ಸೀಲ್ಡೌನ್
ವೃದ್ಧ ವಾಸವಿದ್ದ ಅಪ್ತ ಗುಂಬಜ್ ಏರಿಯಾವನ್ನು ಜಿಲ್ಲಾಡಳಿತ ಸೀಲ್ಡೌನ್ ಮಾಡಿದೆ. ಪೊಲೀಸರು ಬಡಾವಣೆಯ ರಸ್ತೆಗಳ ಮಧ್ಯೆ ಪೈಪ್ಗಳನ್ನು ಹಾಕಿ ಬಂದ್ ಮಾಡಿದ್ದಾರೆ. ಜನ ಯಾರೂ ಕೂಡ ಅತ್ತ ಸುಳಿಯದಂತೆ ನೋಡಿಕೊಂಡಿದ್ದಾರೆ.
ಇನ್ನು ಮೃತ ವೃದ್ಧನ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ. ವೃದ್ಧನಿಗೆ ಸೋಂಕು ಹೇಗೆ ತಗುಲಿದೆ ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಆತನ ಟ್ರಾವೆಲಿಂಗ್ ಹಿಸ್ಟರಿ ನೋಡಿ ಸೋಂಕಿನ ಕುರಿತು ತಿಳಿಯಬೇಕಿದೆ.