ಕರ್ನಾಟಕ

karnataka

ETV Bharat / state

ಕಲಬುರಗಿ: ವಾಟ್ಸ್​​ಆ್ಯಪ್​​, ಫೇಸ್​​​ಬುಕ್​​ನಿಂದ ದೂರು ದಾಖಲಿಸುವ ವಿಭಿನ್ನ ಪ್ರಯತ್ನಕ್ಕೆ ಚಾಲನೆ - ವಾಟ್ಸಾಪ್​ ಮೂಲಕ ಸಂದೇಶ 3

ಸಾರ್ವಜನಿಕರ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ನೀಡುವ ನಿಟ್ಟಿನಲ್ಲಿ ಕಲಬುರಗಿ ಪೊಲೀಸರು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ವಾಟ್ಸಾಪ್​ ಹಾಗೂ ಫೇಸ್​​​​​ಬುಕ್​ ಬಳಸಿ ದೂರು ನೀಡಬಹುದಾದ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ.

ವಾಟ್ಸಾಪ್, ಫೇಸ್​​​ಬುಕ್​​ನಿಂದ ದೂರು ದಾಖಲಿಸುವ ವಿಭಿನ್ನ ಪ್ರಯತ್ನಕ್ಕೆ ಚಾಲನೆ
ವಾಟ್ಸಾಪ್, ಫೇಸ್​​​ಬುಕ್​​ನಿಂದ ದೂರು ದಾಖಲಿಸುವ ವಿಭಿನ್ನ ಪ್ರಯತ್ನಕ್ಕೆ ಚಾಲನೆ

By

Published : Jun 5, 2021, 9:48 PM IST

ಕಲಬುರಗಿ:ದಿನದಿಂದ ದಿನಕ್ಕೆ ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿದೆ ಹೀಗಾಗಿ ತಂತ್ರಜ್ಞಾನ ಬಳಸಿಕೊಂಡು ಕಲಬುರಗಿ ನಗರ ಪೊಲೀಸರು ಅಪರಾಧಗಳನ್ನು ತಡೆಯಲು ಮುಂದಾಗಿದ್ದಾರೆ.

ಕಲಬುರಗಿ ಜನರು ದೂರು ಕೊಡಲು ಈಗ ಪೊಲೀಸ್ ಠಾಣೆಗಳಿಗೆ ಕಲಿಯಬೇಕಾದ ಅವಶ್ಯಕತೆ ಇರುವ ಸ್ಥಳದಲ್ಲಿ ಸುಲಭವಾಗಿ ವಾಟ್ಸ್​​ಆ್ಯಪ್​​ ಮೂಲಕ ಯಾವುದೇ ಠಾಣೆಯಲ್ಲಿ ಬೇಕಾದರೂ ದೂರು ದಾಖಲಿಸಬಹುದು. ದೂರು ದಾಖಲಾದ ತಕ್ಷಣವೇ ಪೊಲೀಸರು ನಿಮ್ಮ ಸಮಸ್ಯೆಗೆ ಸ್ಪಂದಿಸಲಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಬುರಗಿ ನಗರದಲ್ಲಿರುವ 12 ಪೊಲೀಸ್ ಠಾಣೆಯ ಪ್ರತ್ಯೇಕ ಫೇಸ್​ಬುಕ್ ಪೇಜ್​ಗಳನ್ನು ಕ್ರಿಯೇಟ್ ಮಾಡಲಾಗಿದೆ‌. ಫೇಸ್​​ಬುಕ್​​ನಲ್ಲಿ ಸಂದೇಶ ಕಳುಹಿಸಿದರೆ ಸಾಕು ನಿಮ್ಮ ಸಂದೇಶ ತಲುಪಿದ ಕೆಲವೇ ನಿಮಿಷಗಳಲ್ಲಿ ಪೊಲೀಸರು ನಿಮ್ಮ ಸಮಸ್ಯೆಗೆ ಸ್ಪಂದಿಸುವರು. ಜತೆಗೆ ವಾಟ್ಸ್​​ಆ್ಯಪ್​​​ ಲಿಂಕ್ ಕೂಡಾ ಪೇಜ್​​ನಲ್ಲಿ ನೀಡಲಾಗಿದೆ. ಅದರ ಮೇಲೆ ಕ್ಲಿಕ್ ಮಾಡಿದರೆ, ಠಾಣೆಯ ಇನ್ಸ್​ಪೆಕ್ಟರ್ ನಂಬರ್ ವಾಟ್ಸ್​ಆ್ಯಪ್​​ ಮೂಲಕ ಸಂದೇಶ ತಲುಪುತ್ತದೆ.

ಆನ್​​​ಲೈನ್ ದೂರಿನ ನಂಬರ್​​ಗಳು

ಅಲ್ಲದೇ ದೂರು ದಾಖಲಾದ ನಂತರ ಅವಶ್ಯಕತೆ ಇದ್ದರೆ ಪೊಲೀಸರೇ ದೂರು ನೀಡಿದವರ ಮನೆಗೆ ಹೋಗಿ ಮಾಹಿತಿ ಪಡೆಯಲಿದ್ದಾರೆ. ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯದಂತಹ ದೂರುಗಳಿದ್ದರೆ ಕೂಡಲೇ ಪೊಲೀಸರು ನೊಂದವರ ಮನೆಗೆ ಹೋಗಿ ಅವರ ರಕ್ಷಣೆಗೆ ಬೇಕಾದ ಕ್ರಮ ಕೈಗೊಳ್ಳಲಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಜನರು ರಕ್ಷಣೆಗಾಗಿ ಈ ರೀತಿ ವಿನೂತನ ಪ್ರಯತ್ನಕ್ಕೆ ಕಲಬುರಗಿ ನಗರ ಪೊಲೀಸರು ಸಜ್ಜಾಗಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ABOUT THE AUTHOR

...view details