ಕಲಬುರಗಿ: ದರೋಡೆಗೆ ಹೊಂಚು ಹಾಕಿದ್ದ ಕುಖ್ಯಾತ ರೌಡಿ ಖಲೀಲ ಸಹಚರರನ್ನು ಬಂಧಿಸುವಲ್ಲಿ ವಿವಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಬುರಗಿ: ದರೋಡೆಗೆ ಹೊಂಚು ಹಾಕಿದ್ದ ಕುಖ್ಯಾತ ರೌಡಿ ಸಹಚರರ ಬಂಧನ - notorious rowdy Khalil companions arrest in Kalaburagi
ಕಲಬುರಗಿಯಲ್ಲಿ ದರೋಡೆಗೆ ಹೊಂಚು ಹಾಕಿದ್ದ ಕುಖ್ಯಾತ ರೌಡಿ ಸಹಚರರನ್ನ ಬಂಧಿಸಲಾಗಿದ್ದು, ಬಂಧಿತರಿಂದ ಒಂದು ದ್ವಿಚಕ್ರ ವಾಹನ, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ದರೋಡೆಗೆ ಹೊಂಚು ಹಾಕಿದ್ದ ಕುಖ್ಯಾತ ರೌಡಿ ಸಹಚರರ ಬಂಧನ
ಕಲಬುರಗಿ-ಶಹಾಬಾದ್ ರಿಂಗ್ ರಸ್ತೆ ಬಳಿ ಮುಸುಕು ಧರಿಸಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ನಾಲ್ವರು ಖದೀಮರನ್ನು ವಿವಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಜಾನಂದ ದೇಶಪಾಂಡೆ, ಇಕ್ಬಾಲ್ ರಜಾಕ್, ಮಹಮ್ಮದ್ ಇಕ್ಬಾಲ್, ಅಸ್ಪಕ್ ಬಂಧಿತ ಆರೋಪಿಗಳು.
ಆರೋಪಿಗಳಿಂದ ಒಂದು ದ್ವಿಚಕ್ರ ವಾಹನ, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.