ಬೆಂಗಳೂರು:ಸಂಪುಟ ವಿಸ್ತರಣೆ ವೇಳೆ ಕಲಬುರಗಿ ಜಿಲ್ಲೆಯನ್ನು ಪರಿಗಣಿಸದಿರುವ ಕಾರಣ ಸಿಎಂ ಬಿ.ಎಸ್ ಯಡಿಯೂರಪ್ಪರನ್ನು ಸಂಸದ ಉಮೇಶ್ ಜಾಧವ್ ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆ.
ಕಲಬುರಗಿಗೆ ಸಿಗದ ಸಚಿವ ಸ್ಥಾನ: ಸಿಎಂ ಭೇಟಿ ಮಾಡಿ ಲಾಬಿ ನಡೆಸಿದ ಉಮೇಶ್ ಜಾಧವ್ - ಸಿಎಂ ಭೇಟಿ ಮಾಡಿದ ಉಮೇಶ್ ಜಾಧವ್
ಬಿಜೆಪಿಯ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಕಲಬುರಗಿ ಕ್ಷೇತ್ರಕ್ಕೆ ಯಾವುದೇ ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಸಂಸದ ಉಮೇಶ್ ಜಾಧವ್ ಬಿ.ಎಸ್ ಯಡಿಯೂರಪ್ಪನವರನ್ನು ಭೇಟಿ ಮಾಡಿ ಲಾಬಿ ನಡೆಸಿದ್ರು.
ಉಮೇಶ್ ಜಾಧವ್
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಆಗಮಿಸಿದ ಅವರು, ತಮ್ಮ ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್ ವೈ, ಮುಂಬರುವ ಸಂಪುಟ ವಿಸ್ತರಣೆ ವೇಳೆ ಜಿಲ್ಲೆಗೆ ಸಚಿವ ಸ್ಥಾನ ಕೊಡಲಾಗುವುದು ಎಂದು ಭರವಸೆ ನೀಡಿದರು.
ಬಾಬುರಾವ್ ಚಿಂಚನಸೂರ್ ಕೂಡಾ, ತಮ್ಮ ಬೆಂಬಲಿಗರ ಮೂಲಕ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಿದ್ದರು.