ಕರ್ನಾಟಕ

karnataka

ETV Bharat / state

ಇದು ಹೆಸರಿಗೆ ಮಾತ್ರ 'ಚೆಕ್​ಪೋಸ್ಟ್'.. ಇಲ್ಲಿ ​ಹೇಳೋರು, ಕೇಳೋರು ಯಾರೂ ಇಲ್ಲ!

ಆರೋಗ್ಯ ಸಿಬ್ಬಂದಿಯಾಗಲಿ, ಹಿರಿಯ ಅಧಿಕಾರಿಗಳಾಗಲಿ ಯಾರೊಬ್ಬರೂ ಇಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ, ಚೆಕ್​ಪೋಸ್ಟ್​ನಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ ಎಂಬಂತಾಗಿದೆ. ಇದಕ್ಕೆಲ್ಲಾ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ..

Kalaburagi checkpost
ಕಲಬುರಗಿ ಗಡಿಯಲ್ಲಿರುವ ಚೆಕ್​ಪೋಸ್ಟ್​

By

Published : Nov 28, 2021, 5:08 PM IST

Updated : Nov 28, 2021, 6:22 PM IST

ಕಲಬುರಗಿ :ಕೊರೊನಾ ರೂಪಾಂತರಿ 'ಓಮಿಕ್ರಾನ್' ಆತಂಕದ ಹಿನ್ನೆಲೆ ರಾಜ್ಯದ ಎಲ್ಲ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರವಹಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಆದರೆ, ಕಲಬುರಗಿ ಗಡಿಯಲ್ಲಿ ಹೆಸರಿಗೆ ಮಾತ್ರ ಚೆಕ್​ಪೋಸ್ಟ್ ನಿರ್ಮಾಣ ಮಾಡಿದಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮಹಾರಾಷ್ಟ್ರದಿಂದ ಸಾಕಷ್ಟು ವಾಹನಗಳು ಗಡಿ ಜಿಲ್ಲೆಗಳ ಮೂಲಕ ರಾಜ್ಯವನ್ನು ಪ್ರವೇಶಿಸುತ್ತಿವೆ. ಆದರೆ, ಚೆಕ್​ಪೋಸ್ಟ್​ನಲ್ಲಿ ಕೇವಲ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಮಾತ್ರ ನಿಯೋಜಿಸಲಾಗಿದೆ.

ಕಲಬುರಗಿ ಗಡಿಯಲ್ಲಿರುವ ಚೆಕ್​ಪೋಸ್ಟ್​

ಆರೋಗ್ಯ ಸಿಬ್ಬಂದಿಯಾಗಲಿ, ಹಿರಿಯ ಅಧಿಕಾರಿಗಳಾಗಲಿ ಯಾರೊಬ್ಬರೂ ಇಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ, ಚೆಕ್​ಪೋಸ್ಟ್​ನಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ ಎಂಬಂತಾಗಿದೆ. ಇದಕ್ಕೆಲ್ಲಾ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಮಹಾರಾಷ್ಟ್ರದಿಂದ ಜನ ಅತಿಯಾಗಿ ಆಗಮಿಸಿದ್ದರಿಂದಲೇ ಸೋಂಕು ಸ್ಫೋಟಗೊಂಡು ನಿಯಂತ್ರಣಕ್ಕೆ ತರಲಾಗದೆ ಹಲವು ಸಾವು-ನೋವುಗಳನ್ನು ಅನುಭವಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಈಗಲೂ ಸಹ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದರೆ ಅದರಿಂದ ಸಾಕಷ್ಟು ಸಮಸ್ಯೆ ಎದುರಾಗುತ್ತದೆ ಎಂಬುದು ಸಾರ್ವಜನಿಕರ ಅಳಲಾಗಿದೆ.

ಓದಿ:ಬೆಂಗಳೂರಿನಲ್ಲಿ ಮುನಾವರ್ ಫಾರೂಕಿ ಸ್ಟ್ಯಾಂಡ್ ಅಪ್ ಕಾಮಿಡಿ ಶೋ ರದ್ದು

Last Updated : Nov 28, 2021, 6:22 PM IST

ABOUT THE AUTHOR

...view details