ಕಲಬುರಗಿ:ರಾಜ್ಯಾದ್ಯಂತ ಇಂದು ಸಂಡೇ ಲಾಕ್ಡೌನ್ ಇದ್ದರೂ ರಸ್ತೆಗಿಳಿದಿದ್ದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಕಲಬುರಗಿಯಲ್ಲಿ ಸಂಡೇ ಲಾಕ್ಡೌನ್ಗೆ ಡೋಂಟ್ ಕೇರ್: ಲಾಠಿ ರುಚಿ ತೋರಿಸಿದ ಪೊಲೀಸರು - ಕಲಬುರಗಿ ಕೊರೊನಾ‘
ರಾಜ್ಯಾದ್ಯಂತ ಇಂದು ಸಂಡೇ ಲಾಕ್ಡೌನ್ ಇದ್ದರೂ ಕಲಬುರಗಿ ಜನತೆ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇಂದು ವಾಹನ ಸವಾರರು ರಸ್ತೆಗಿಳಿದಿದ್ದು, ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಕಲಬುರಗಿಯಲ್ಲಿ ಲಾಠಿ ರುಚಿ ತೋರಿಸಿದ ಪೊಲೀಸರು
ನಗರದಲ್ಲಿ ಆಟೋ ಸಂಚಾರ ಯಥಾವತ್ತಾಗಿ ನಡೆಯುತ್ತಿದೆ. ಸಂಡೇ ಲಾಕ್ಡೌನ್ ವೇಳೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ವಾಹನ ಸವಾರರನ್ನು ನಿಯಂತ್ರಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಾಹನ ಸವಾರರನ್ನು ಪೊಲೀಸ್ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದು, ಲಾಕ್ಡೌನ್ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಕಲಬುರಗಿಯಲ್ಲಿ ಲಾಠಿ ರುಚಿ ತೋರಿಸಿದ ಪೊಲೀಸರು
ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್:ನಿನ್ನೆ ರಾತ್ರಿ 8 ಗಂಟೆಯಿಂದಲೇ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಆದರೆ ಜಿಲ್ಲೆಯಲ್ಲಿ ಆಸ್ಪತ್ರೆ ಸೇವೆ ಸೇರಿದಂತೆ ಅಗತ್ಯ ಸೇವೆಗಳು ಎಂದಿನಂತೆ ಮುಂದುವರೆದಿವೆ.