ಕಲಬುರಗಿ: ವಿಷ ಸೇವಿಸಿ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಗ್ರಾಮದಲ್ಲಿ ನಡೆದಿದೆ.
ಕಲಬುರಗಿಯಲ್ಲಿ ವಿಷ ಸೇವಿಸಿ ನವ ವಿವಾಹಿತೆ ಆತ್ಮಹತ್ಯೆ: ಪತಿಯ ಕಿರುಕುಳ ಶಂಕೆ - ವಿಷ ಸೇವಿಸಿ ನವ ವಿವಾಹಿತೆ ಆತ್ಮಹತ್ಯೆ
ಕಲಬುರಗಿಯಲ್ಲಿ ವಿಷ ಸೇವಿಸಿ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ಮತ್ತು ಮನೆಯವರ ಕಿರುಕುಳದ ಶಂಕೆ ವ್ಯಕ್ತವಾಗಿದೆ.
ನವ ವಿವಾಹಿತೆ ಆತ್ಮಹತ್ಯೆ
ಮೃತರನ್ನು ಕಾಶಿಬಾಯಿ (23) ಎಂದು ಗುರುತಿಸಲಾಗಿದೆ. ಕಾಶಿಬಾಯಿಯನ್ನು ಮೂರು ತಿಂಗಳ ಹಿಂದೆಯಷ್ಟೇ ಗಾಣಗಾಪುರದ ಶ್ರೀಪಾದ್ ಎಂಬವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಇದೀಗ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪತಿ ಮತ್ತು ಮನೆಯವರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.