ಕಲಬುರಗಿ:ಅಕ್ರಮ ಗಾಂಜಾ ಪತ್ತೆಯಾದ ಬೆನ್ನಲ್ಲೇ ಕಲಬುರಗಿ ಪೊಲೀಸರು ಅಕ್ರಮ ಗಾಂಜಾ ನಿಯಂತ್ರಣಕ್ಕಾಗಿ ವಿಶೇಷ ತಂಡ ರಚಿಸಿದ್ದಾರೆ.
ಅಕ್ರಮ ಗಾಂಜಾ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಕಬ್ಬಿನ ಹೊಲದಲ್ಲಿ ಗಾಂಜಾ ಪತ್ತೆಯಾದ ಪ್ರಕರಣ ಹಿನ್ನೆಲೆ ಪೊಲೀಸರು ಅಕ್ರಮ ಗಾಂಜಾ ನಿಯಂತ್ರಣ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಮಿ ಮರಿಯಮ್, ಜಿಲ್ಲೆಯ ಹಲವೆಡೆ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಮೊದಲು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅಕ್ರಮ ಗಾಂಜಾ ಬೆಳೆದಿರುವುದು ಕಂಡುಬಂದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ನೆರೆಯ ತೆಲಂಗಾಣಕ್ಕೆ ಸಾಗಿಸಲು ವ್ಯವಸ್ಥೆ ಮಾಡಲಾಗಿದ್ದ ಸಂಗಾಪುರದಲ್ಲಿ ಬೆಳೆಯಲಾಗಿದ್ದ ಗಾಂಜಾವನ್ನು 88ಕೆ ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳ ಪೈಕಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿಯ ಬಂಧನಕ್ಕೆ ಜಾಲ ಬೀಸಿರುವುದಾಗಿ ಮರಿಯಮ್ ಜಾಜ್೯ ಅವರು ಮಾಹಿತಿ ನೀಡಿದರು.ಚೆಕ್ಪೋಸ್ಟ್ ನಿರ್ಮಾಣ:ಕಲಬುರಗಿಯಲ್ಲಿ ಬೆಳೆದ ಅಕ್ರಮ ಗಾಂಜಾವನ್ನು ನೆರೆರಾಜ್ಯ ತೆಲಂಗಾಣಕ್ಕೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ದೊರೆತಿದ್ದು. ಕರ್ನಾಟಕ ಮತ್ತು ತೆಲಂಗಾಣ ಬಾರ್ಡರ್ ನಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುತ್ತಿದೆ. ಚೆಕ್ ಪೋಸ್ಟ್ ಗಳಲ್ಲಿ ಸರ್ಪ್ರೈಸ್ ದಾಳಿ ನಡೆಸಿ ಅಕ್ರಮ ಗಾಂಜಾ ಸಾಗಾಣಿಕೆಯನ್ನು ತಡೆಗಟ್ಟಲಾಗುವುದು. ಗಾಂಜಾ ಒಂದೇ ಅಲ್ಲದೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಡ್ರಗ್ಸ್ ದಂಧೆ ನಡೆದಿರೋದು ಕಂಡು ಬಂದರೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.