ಕಲಬುರಗಿ:ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಲೇ ಇಲ್ಲ. ಇಂದು ಕೂಡಾ 8 ಹೊಸ ಪ್ರಕರಣಗಳು ವರದಿಯಾಗಿದೆ. ಬೆಳಗ್ಗೆ 2 ಪ್ರಕರಣ ವರದಿಯಾಗಿದ್ದು ಸಂಜೆ ವೇಳೆಗೆ ಮತ್ತೆ 6 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕಲಬುರಗಿಯಲ್ಲಿಂದು 8 ಹೊಸ ಕೊರೊನಾ ಪ್ರಕರಣ ದೃಢ..ಒಟ್ಟು ಸೋಂಕಿತರ ಸಂಖ್ಯೆ 81 - Kalaburagi corona cases
ಕಲಬುರಗಿಯಲ್ಲಿ ಇಂದೂ ಕೂಡಾ 8 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 81ಕ್ಕೆ ಏರಿದೆ. ಈ ಮಾರಕ ವೈರಸ್ಗೆ ಜಿಲ್ಲೆಯಲ್ಲಿ ಇದುವರೆಗೂ 7 ಮಂದಿ ಬಲಿಯಾಗಿದ್ದಾರೆ.
ಪಿ.806 ಕಮಲಾಪುರದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ 42, 35, 28 ವರ್ಷದ ಮೂವರು ಮಹಿಳೆಯರು ಹಾಗೂ 15 ವರ್ಷದ ಬಾಲಕಿ ಸೇರಿ ಒಟ್ಟು ನಾಲ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರಂತೆ ಪಿ. 848 ಸಂಪರ್ಕದಲ್ಲಿದ್ದ 30 ವರ್ಷದ ಮಹಿಳೆಗೆ ಮತ್ತು ಆಂಧ್ರ ಪ್ರದೇಶದ ಗುಂಟೂರಿನಿಂದ ಬಂದಿದ್ದ 19 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ.
ಇಂದು ಬೆಳಗ್ಗೆ ಕೂಡಾ ಇಬ್ಬರಿಗೆ ಪಾಸಿಟಿವ್ ವರದಿಯಾಗಿತ್ತು. ಇವರಲ್ಲಿ ಓರ್ವ 60 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. 15 ವರ್ಷದ ಬಾಲಕಿಗೆ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ ಇಂದು ಒಂದೇ ದಿನ 8 ಜನರಿಗೆ ಕೊರೊನಾ ವೈರಸ್ ತಗುಲಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 81 ಕ್ಕೆ ಏರಿಕೆಯಾಗಿದೆ. 7 ಮಂದಿ ಈ ವೈರಸ್ಗೆ ಬಲಿಯಾಗಿದ್ದಾರೆ.