ಕರ್ನಾಟಕ

karnataka

By

Published : Mar 26, 2021, 6:03 PM IST

ETV Bharat / state

ಕಲಬುರಗಿಯಲ್ಲಿ ಕಲಾ ಬೆಳದಿಂಗಳು: ಗ್ರಾಮೀಣ ಸೊಬಗಿಗೆ ಕೈಗನ್ನಡಿ

ಕಲಬುರಗಿ ಆರ್ಟ್ ಸೊಸೈಟಿ ವತಿಯಿಂದ ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಇಲ್ಲಿ ಒಂದಕ್ಕಿಂತ ಒಂದು ಸುಂದರವಾಗಿದ್ದ ಪೇಂಟಿಂಗ್ಸ್​ಗಳು ಕಲಾ ಪ್ರೇಕ್ಷಕರ ಮನವನ್ನು ಸೆಳೆದರೆ, ಛಾಯಾಚಿತ್ರ, ರೇಖಾಚಿತ್ರಗಳು ಮಕ್ಕಳ ಮನಸ್ಸನ್ನು ಸೂರೆಗೊಂಡವು.

national-level-painting-exhibition-at-kalaburagi
ಕಲಬುರಗಿಯಲ್ಲಿ ಕಲಾ ಬೆಳದಿಂಗಳು

ಕಲಬುರಗಿ: ಇದೇ ಮೊದಲ ಬಾರಿಗೆ ನಗರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಪ್ರದರ್ಶನದಲ್ಲಿ ವರ್ಣರಂಜಿತ ಚಿತ್ರ, ಛಾಯಾಚಿತ್ರ, ರೇಖಾಚಿತ್ರ ಸೇರಿದಂತೆ ವಿವಿಧ ಗ್ರಾಮೀಣ ಸೊಬಗನ್ನು ಸಾರುವ ಆಕರ್ಷಕ ಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದರಿಂದ ಕಲಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರಕಲಾವಿದರಾದ ಡಾ.ಪರಶುರಾಮ ಮಾತನಾಡಿದರು

ಕಲಬುರಗಿ ಆರ್ಟ್ ಸೊಸೈಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಥಮ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಿರಿಯ ಚಿತ್ರಕಲಾವಿದ ಡಾ. ವಿ.ಜಿ. ಅಂದಾನಿ ಉದ್ಘಾಟಿಸಿದರು. ಇಲ್ಲಿ ಒಂದಕ್ಕಿಂತ ಒಂದು ಸುಂದರವಾಗಿದ್ದ ಪೇಂಟಿಂಗ್ಸ್​ಗಳು ಕಲಾ ಪ್ರೇಕ್ಷಕರ ಮನವನ್ನು ಸೆಳೆದರೆ, ಛಾಯಾಚಿತ್ರ, ರೇಖಾಚಿತ್ರಗಳು ಮಕ್ಕಳ ಮನಸ್ಸನ್ನು ಸೂರೆಗೊಳಿಸಿತು.

ಕೋವಿಡ್​ ನಡುವೆಯೂ ಕಲಾ ಸೌಂದರ್ಯವನ್ನು ಉಣಬಡಿಸುವ ಕಾರ್ಯ ಯಶಸ್ವಿಯಾಗಿ ನಡೆಯಿತು. ಚಿತ್ರಕಲಾ ಪ್ರದರ್ಶನ ಜೊತೆಗೆ ಅತ್ಯುತ್ತಮ ಚಿತ್ರ ಕಲಾವಿದರಿಗೆ ಪ್ರಶಸ್ತಿ ಪ್ರದಾನವನ್ನೂ ಮಾಡಲಾಯಿತು.

ಓದಿ:ರಾಜ್ಯದಲ್ಲಿ ಹೊಸ ಮರಳು ನೀತಿ.. ನಿಯಮ, ವಿಶೇಷತೆಗಳೇನು?

ABOUT THE AUTHOR

...view details