ಕಲಬುರಗಿ:ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೊಡ್ಡ ಪುಕ್ಕಲರು. ಅವರಿಗೆ ಹಾಕಿಕೊಳ್ಳಲು ಬಳೆ ಕಳುಹಿಸುತ್ತೇನೆ. ತೊಟ್ಟುಕೊಂಡು ಆಡಳಿತ ನಡೆಸಲಿ ಎಂದು ವೇದಿಕೆ ಮೇಲೆ ಬಳೆಗಳನ್ನು ತೋರಿಸಿದ ಜೆಡಿಎಸ್ ಯುವ ನಾಯಕ ನಾಸೀರ್ ಹುಸೇನ್ ಉಸ್ತಾದ್ ಲೇವಡಿ ಮಾಡಿದ್ದಾರೆ.
ಶಾ, ಮೋದಿ ಪುಕ್ಕಲರು, ಬಳೆ ತೊಟ್ಟು ಆಡಳಿತ ನಡೆಸಲಿ: ಜೆಡಿಎಸ್ ನಾಯಕ ನಾಸೀರ್ - ಕಲಬುರಗಿಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆ
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೊಡ್ಡ ಪುಕ್ಕಲರು. ಅವರಿಗೆ ಹಾಕಿಕೊಳ್ಳಲು ಬಳೆ ಕಳುಹಿಸುತ್ತೇನೆ. ತೊಟ್ಟುಕೊಂಡು ಆಡಳಿತ ನಡೆಸಲಿ ಎಂದು ವೇದಿಕೆ ಮೇಲೆ ಬಳೆಗಳನ್ನು ತೋರಿಸಿದ ಜೆಡಿಎಸ್ ಯುವ ನಾಯಕ ನಾಸೀರ್ ಹುಸೇನ್ ಉಸ್ತಾದ್ ಲೇವಡಿ ಮಾಡಿದ್ದಾರೆ.
![ಶಾ, ಮೋದಿ ಪುಕ್ಕಲರು, ಬಳೆ ತೊಟ್ಟು ಆಡಳಿತ ನಡೆಸಲಿ: ಜೆಡಿಎಸ್ ನಾಯಕ ನಾಸೀರ್ naseer talk against modi, shaa in kalaburgi](https://etvbharatimages.akamaized.net/etvbharat/prod-images/768-512-5794946-thumbnail-3x2-jnhjj.jpg)
ಜೆಡಿಎಸ್ ಯುವ ನಾಯಕ ನಾಸೀರ್ ಹುಸೇನ್ ಉಸ್ತಾದ್
ಜೆಡಿಎಸ್ ಯುವ ನಾಯಕ ನಾಸೀರ್ ಹುಸೇನ್ ಉಸ್ತಾದ್
ನಗರದ ಪೀರ್ ಬಂಗಾಲ್ ಮೈದಾನದಲ್ಲಿ ಆಯೋಜಿಸಿದ್ದ ಪೌರತ್ವ ವಿರೋಧಿ ಸಮಾವೇಶದಲ್ಲಿ ನಿರ್ಣಯ ಅಂಗೀಕಾರ ಮಾಡಿ ಮಾತನಾಡಿದ ಅವರು, ಪೌರತ್ವ ಮಸೂದೆ ಬಗ್ಗೆ ಮುಸ್ಲಿಮರು ಹೆದರಬೇಕಿಲ್ಲ ಎಂದು ಅಮಿತ್ ಶಾ ಹೇಳುತ್ತಾರೆ. ಶಾ ಅವರೇ ನಾವು ಮಸೂದೆಗೆ ಹೆದರಲ್ಲ, ನಿಮಗೂ ಹೆದರಲ್ಲ ಎಂದು ಪ್ರತಿಕ್ರಿಯಿಸಿದರು.
ನಾವು ಈ ದೇಶದ ನಿವಾಸಿಗಳಿದ್ದೇವೆ. ನಾವು ಯಾರು ಯಾವುದಕ್ಕೂ ಹೆದರುವುದಿಲ್ಲ. ಆದರೆ, ನೀನೊಬ್ಬ ದೊಡ್ಡ ಅಂಜುಬುರಕ. ಅದಕ್ಕಾಗಿ ನಿಮಗಾಗಿ ಬಳೆ ಕಳುಹಿಸಿಕೊಡುತ್ತೇವೆ ಎಂದು ಏಕ ವಚನದಲ್ಲಿ ಟೀಕಿಸಿದ್ದಾರೆ. ಪೌರತ್ವ ಮಸೂದೆ ವಿರುದ್ಧ ಅಸಹಕಾರ ಚಳವಳಿ ನಡೆಸುವುದಾಗಿ ಕೇಂದ್ರಕ್ಕೆ ಎಚ್ಚರಿಕೆ ನೀಡಿದರು.