ಕಲಬುರಗಿ:ಗೂಂಡಾ ಸಂಸ್ಕೃತಿ ಬಿಜೆಪಿಯದ್ದಲ್ಲ. ಪ್ರಿಯಾಂಕ್ ಖರ್ಗೆ ಯಾಕೆ ಹೆದರಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಚಿತ್ತಾಪುರದಲ್ಲಿ ಅವರಿಗೆ ಸೋಲಿನ ಭಯ ಕಾಡುತ್ತಿದೆ. ಅದಕ್ಕಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ. ತಂದೆಗೆ ಸೋಲಾದ ರೀತಿಯಲ್ಲಿ ಪ್ರಿಯಾಂಕ್ ಖರ್ಗೆಗೂ ಹೀನಾಯ ಸೋಲಾಗುತ್ತದೆ ಎಂದು ವಿಧಾನ್ ಪರಿಷತ್ ಸದಸ್ಯ ಎನ್ ರವಿಕುಮಾರ್ ಭವಿಷ್ಯ ನುಡಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ.20 ರಂದು ಬಳ್ಳಾರಿಯಲ್ಲಿ ನಡೆಯಲಿರುವ ಎಸ್ಟಿ ಸಮಾವೇಶದಲ್ಲಿ 5 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಹಿಂದೆಂದೂ ಎಸ್ಟಿ ಸಮಾವೇಶ ಆಗದ ರೀತಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈಗಾಗಲೇ ಉತ್ಸಾಹ ಭರಿತವಾಗಿ ಜನಸಂಕಲ್ಪ ಯಾತ್ರೆ ನಡೆಯುತ್ತಿದೆ. ನ.15 ರಂದು, ಕಡೂರು, ತರಿಕೆರೆಯಲ್ಲಿ ಜನ ಸಂಕಲ್ಪ ಯಾತ್ರೆ ನಡೆಯಲಿದೆ. ಬಳಿಕ ನ.20 ರಂದು ಬಳ್ಳಾರಿಯಲ್ಲಿ ಎಸ್ಟಿ ಸಮಾವೇಶ ನಡೆಯಲಿದೆ. ಕಲಬುರಗಿಯಲ್ಲಿ ಒಬಿಸಿ ಸಮಾವೇಶ ಯಶಸ್ವಿಯಾದ ರೀತಿಯಲ್ಲಿಅಲ್ಲಿಯೂ ಯಶಸ್ವಿಯಾಗಿ ಸಮಾವೇಶ ಜರುಗಲಿದೆ ಎಂದರು.