ಕಲಬುರಗಿ:ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬರುತ್ತಿರುವುದು ಮಾಧ್ಯಮಗಳ ಸೃಷ್ಟಿಯಿಂದ ಹೊರತು ವಾಸ್ತವವಲ್ಲ. ಇದು ಕೇವಲ ಊಹಾಪೋಹ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬರುತ್ತಿರುವುದು ಕೇವಲ ಊಹಾಪೋಹ: ಮಲ್ಲಿಕಾರ್ಜುನ ಖರ್ಗೆ - undefined
ಚುನಾವಣೆಯಲ್ಲಿ ಸೋಲು ಗೆಲುವು ಇದ್ದದ್ದೆ. ರಾಹುಲ್ ಗಾಂಧಿ ಅವರು ನೀಡಿರುವ ರಾಜೀನಾಮೆ ವಾಪಸ್ ಪಡೆಯುವಂತಹ ಪ್ರಯತ್ನ ಮಾಡುತ್ತಿದ್ದೇವೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬರುತ್ತಿರುವುದು ಮಾಧ್ಯಮಗಳ ಸೃಷ್ಟಿಯಿಂದ ಹೊರತು ವಾಸ್ತವವಲ್ಲ.
![ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬರುತ್ತಿರುವುದು ಕೇವಲ ಊಹಾಪೋಹ: ಮಲ್ಲಿಕಾರ್ಜುನ ಖರ್ಗೆ](https://etvbharatimages.akamaized.net/etvbharat/prod-images/768-512-3524046-472-3524046-1560179939966.jpg)
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು ಗೆಲುವು ಇದ್ದದ್ದೆ. ಹೀಗಾಗಿ ರಾಹುಲ್ ಗಾಂಧಿ ಅವರು ನೀಡಿರುವ ರಾಜೀನಾಮೆ ವಾಪಸ್ ಪಡೆಯುವಂತಹ ಪ್ರಯತ್ನ ಮಾಡುತ್ತಿದ್ದೇವೆ. ಅವರ ಮನವೊಲಿಕೆ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಗಾಂಧಿ ಕುಟುಂಬಕ್ಕೆ ಸೀಮಿತವಾಗಿದ್ದು, ವಂಶಪಾರಂಪರ್ಯ ಎಂದಲ್ಲ. ಪಕ್ಷದ ಹಿತದೃಷ್ಟಿಯಿಂದ ರಾಹುಲ್ ಮುಂದುವರಿಯಬೇಕು. ನಮ್ಮ ಪಕ್ಷಕ್ಕೆ ರಾಹುಲ್ ಗಾಂಧಿ ಅಧ್ಯಕ್ಷರಾಗಿರಬೇಕೆಂಬ ಅಪೇಕ್ಷೆಯಿದೆ. ಆದರೆ ಅವರು ಮುಂದುವರಿಯಲು ತಯಾರಿಲ್ಲ ಎನ್ನುತ್ತಿದ್ದಾರೆ. ರಾಹುಲ್ ಮುಂದುವರಿಯಬೇಕೆಂಬುದು ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವಾಗಿದೆ. ನಮ್ಮ ಪ್ರಯತ್ನ ಮುಂದುವರಿಸ್ತೇವೆ ಎಂದು ಖರ್ಗೆ ಹೇಳಿದರು.