ಸೇಡಂ :ಮೂಕಾಭಿನಯದ ಮೂಲಕ ಗುರುತಿಸಿಕೊಂಡು ದೇಶ ಸಂಚಾರ ಮಾಡಿದ ತಾಲೂಕಿನ ನಾಚವಾರ ಗ್ರಾಮದ ರಂಗ ಪ್ರತಿಭೆ ಮೈಮ್ ಮುರುಗೇಂದ್ರ ಅವರು ರಾಜ್ಯ ಮಟ್ಟದ ಸೇವಾ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೈಮ್ ಮುರುಗೇಂದ್ರ ಅವರ ಮೂಕಾಭಿನಯ ಮಾರ್ಚ್ 21ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 9ಕ್ಕೆ ಜರುಗುವ ಸಮಿತಿಯ ದಶಮಾನೋತ್ಸವ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಪರಿಚಯ :ಮೈಮ್ ಮುರುಗೇಂದ್ರ ಮೂಲತಃ ನಾಚವಾರ ಗ್ರಾಮದವರು. ಬಿಎ ಮತ್ತು ಎಂಎ ಪದವಿ ಜೊತೆಗೆ ನೀನಾಸಂ ಬೇಸಿಗೆ ತರಬೇತಿ ಪಡೆದಿದ್ದಾರೆ. ಸಾಣೇಹಳ್ಳಿಯಲ್ಲಿ ಒಂದು ವರ್ಷ ನಾಟಕ ಡ್ರಾಮಾ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಶಿವಸಂಚಾರವೆಂಬ ತಿರುಗಾಟವನ್ನು ಇಡೀ ರಾಜ್ಯ ಮತ್ತು ದೇಶಗಳಲ್ಲಿ ಸಂಚಾರ ಮಾಡಿದ ಖ್ಯಾತಿ ಮುರುಗೇಂದ್ರ ಅವರದ್ದಾಗಿದೆ.
ಪಶ್ಚಿಮ ಬಂಗಾಳ ರಾಜ್ಯದ ರಾಷ್ಟ್ರೀಯ ಮೂಕಾಭಿನಯ ಶಾಲೆಯಲ್ಲಿ ಒಂದು ವರ್ಷ ಮೈಮ್ (ಮೂಕಾಭಿನಯ) ತರಬೇತಿ ಪಡೆದಿದ್ದಾರೆ. ಮ್ಯಾಕ್ ಬೆತ್, ಉತ್ತರ ರಾಮಚರಿತಂ, ಸಂಕಾನಟ್ಟಿಯ ಚಂದ್ರಿ, ಗಿರಿಜಾಕಲ್ಯಾಣ, ನಾಣಿ ಭಟ್ಟನ ಸ್ವರ್ಗದ ಕನಸು, ಗುಣಮುಖ, ಸದಾರಮೆ, ಇವ ನಮ್ಮವ, ಸುಳೆ ಸನ್ಯಾನಿ, ಹ್ಯಾಮಲೆಟ್, ಮಿಡ್ಸ್ ಸಮ್ಮರ್ ನೈಟ್ ಡ್ರೀಮ್ಸ್, ಒಥೆಲೋ, ತಲೆದಂಡ, ಶಿವರಾತ್ರಿ, ನಾಗಮಂಡಲ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಇದನ್ನೂ ಓದಿ:ಕಲ್ಲು ಕ್ವಾರಿಯಲ್ಲಿ ಹಫ್ತಾ ವಸೂಲಿ ಎಗ್ಗಿಲ್ಲದೆ ನಡೆಯುತ್ತಿದೆ: ಎಸ್.ಆರ್.ಪಾಟೀಲ್