ಕಲಬುರಗಿ: ಮತ್ತೊಂದು ಕೊಲೆ ಪ್ರಕರಣ ನಗರದ ಜನರನ್ನು ಬೆಚ್ಚಿಬೀಳಿಸಿದೆ. ಇಂಜಿನಿಯರಿಂಗ್ ವಿದ್ಯಾರ್ಥಿಯ ಕೈ ಕಟ್ಟಿಹಾಕಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಹೊರವಲಯದ ಸೈಯದ್ ಚಿಂಚೋಳಿ ಕ್ರಾಸ್ ಬಳಿ ನಡೆದಿದೆ.
ಶಿವಪುತ್ರಪ್ಪ ಪಗಡೆ (25) ಕೊಲೆಗೀಡಾಗಿರುವ ವಿದ್ಯಾರ್ಥಿ. ಮೂಲತಃ ಆಳಂದ ತಾಲೂಕಿನ ಬೋಧನ ಗ್ರಾಮದ ನಿವಾಸಿಯಾಗಿದ್ದ ಶಿವಪುತ್ರಪ್ಪ, ನಗರದ ಶಹಾಬಜಾರ್ನಲ್ಲಿ ವಾಸವಾಗಿದ್ದ. ಡಿಪ್ಲೋಮಾ ಮುಗಿಸಿ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಜೊತೆಗೆ ನಗರದಲ್ಲಿ ಕೆಲಸ ಮಾಡಿಕೊಂಡಿದ್ದ. ಶನಿವಾರ ದುಷ್ಕರ್ಮಿಗಳು ಸೈಯದ್ ಚಿಂಚೋಳಿ ಮುಖ್ಯರಸ್ತೆ ಬಳಿಯ ಜಮೀನೊಂದರಲ್ಲಿ ವಿದ್ಯಾರ್ಥಿಯ ಕೈಗೆ ಹಗ್ಗ ಕಟ್ಟಿ ಮುಖದ ಮೇಲೆ ಕಲ್ಲುಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.