ಕಲಬುರಗಿ:ಕೇವಲ 40 ಸಾವಿರ ಹಣಕ್ಕಾಗಿ ಪರಿಚಯಸ್ಥ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಿ ಹೂತು ಹಾಕಿ ಏನು ಮಾಡಿಯೇ ಇಲ್ಲ ಅನ್ನೋ ಹಾಗೆ ಸೈಲೆಂಟ್ ಆಗಿದ್ದ ಖತರ್ನಾಕ ಕೊಲೆಗಡುಕರನ್ನು ಅಫಜಲಪುರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ .
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶ್ಯಾಳ ತಾಂಡಾ ನಿವಾಸಿ ಲಿಂಬಾಜಿ ರಾಠೋಡ್ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಲಿಂಬಾಜಿ ರಾಠೋಡ್ ತಾನಾಯ್ತು ತನ್ನ ಕೆಲಸ ಆಯ್ತು ಅಂತಿದ್ದ. ಆದ್ರೆ ಕಳೆದ ವರ್ಷ ಸೆಪ್ಟೆಂಬರ್ 1ರ ಸಂಜೆ ಈತನ ಬಳಿ ಇದ್ದ 40 ಸಾವಿರ ಹಣ ಈತನಿಗೆ ಉರುಳಾಗಿದೆ.
ಕೊಲೆ ನಡೆದಿದ್ದು ಹೇಗೆ?
ಲಿಂಬಾಜಿ ಬಳಿಯಿದ್ದ ಹಣ ಕಿತ್ತುಕೊಳ್ಳಲು ಮೂವರು ಖದೀಮರು ಹೊಂಚುಹಾಕಿದ್ದರು. ಆ ದಿನ ಸಂಜೆ 4 ಗಂಟೆ ಸುಮಾರಿಗೆ ಹಣದೊಂದಿಗೆ ಬೈಕ್ ಮೇಲೆ ಹೊಗುತ್ತಿದ್ದ ಲಿಂಬಾಜಿಯನ್ನ ಮಾಶ್ಯಾಳ ಗ್ರಾಮದ ಹೊರವಲಯ ಶಾಲೆ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಲಿಂಬಾಜಿಗೆ ಕಂಠಪೂರ್ತಿ ಕುಡಿಸಿದ ಆರೋಪಿಗಳು ಆತನ ಬಳಿಯಿದ್ದ 40 ಸಾವಿರ ರೂ ಹಣ ಕಿತ್ತುಕೊಳ್ಳು ಯತ್ನಿಸಿದ್ದಾರೆ. ಹಣ ಕೊಡದಿದ್ದಕ್ಕೆ ಆತನ ಕತ್ತು ಹಿಸುಕಿ ನಂತ್ರ ಲಿಂಬಾಜಿ ಎದೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆದ ನಂತರ ಆರೋಪಿಗಳು ಹಣ ಕಿತ್ತುಕೊಂಡಿದ್ದಾರೆ.
ಗುಸು ಗುಸು ಮಾತೇ ಕೊಲೆಗಾರರಿಗೆ ತಂದಿತು ಆಪತ್ತು:
ಕೊಲೆಯ ಸಾಕ್ಷಿ ನಾಶಪಡಿಸಲು ಹಂತಕರು ಶಾಲೆಯ ಸಮೀಪದಲ್ಲಿ ಗುಂಡಿ ತೋಡಿ ಶವ ಹೂತು ಹಾಕಿದ್ದಾರೆ. ಅಲ್ಲದೇ ಬೈಕ್ ತಗ್ಗು ಪ್ರದೇಶದಲ್ಲಿ ಎಸೆದು ಎಸ್ಕೇಪ್ ಆಗಿದ್ದಾರೆ. ಇತ್ತ ಮನೆಯಿಂದ ಹೋದ ಗಂಡ ಮನೆಗೆ ವಾಪಸ್ ಆಗಲಿಲ್ಲ ಅಂತಾ ಆತಂಕಗೊಂಡಿದ್ದ ಲಿಂಬಾಜಿ ಪತ್ನಿ ಸವಿತಾ ರಾಠೋಡ್ ಅಫಜಲಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡ ಪೊಲೀಸರು ಲಿಂಬಾಜಿ ಪತ್ತೆಗೆ ಜಾಲ ಬೀಸಿದ್ರು. ಆದ್ರೆ ಯಾವುದೇ ಪ್ರಯೋಜನ ಆಗಲಿಲ್ಲ. ಆದ್ರೆ ಆ ಢಾಬಾ ಒಂದರಲ್ಲಿ ನಡೆದ ಗುಸುಗುಸು ಮಾತುಗಳು ಕೊಲೆಗಡುಕ ಸಿದ್ದು, ಶರಣು ಮತ್ತು ಅಂಬರೀಶ್ನನ್ನು ಕಂಬಿ ಹಿಂದೆ ತಳ್ಳಿದೆ.