ಸೇಡಂ (ಕಲಬುರಗಿ): ಬೇಸಿಗೆ ಕಾಲ ಆರಂಭವಾಗಿದ್ದು, ಕಲಬುರಗಿಯಲ್ಲಿ ಸೂರ್ಯನ ತಾಪ ಮಿತಿ ಮೀರಿದೆ. ಪಕ್ಷಿಗಳ ಜೀವ ಕಾಪಾಡಲು ತಾಲೂಕಿನ ಮಳಖೇಡ ಗ್ರಾಮದ ಸತ್ಯಮೇವ ಜಯತೆ ವಿದ್ಯಾರ್ಥಿಗಳ ಸಂಘವೊಂದು ಮಾದರಿ ಕಾರ್ಯಕ್ಕೆ ಕೈ ಹಾಕಿದೆ.
ಸತತ 30 ದಿನಗಳಿಂದ ಅಡುಗೆಗೆ ಬಳಸುವ ಸ್ಟೀಲ್ ಡಬ್ಬಗಳನ್ನು ಸಂಗ್ರಹಿಸಿ, ಅವುಗಳನ್ನು ಪಕ್ಷಿಗಳಿಗೆ ಆಹಾರ ಧಾನ್ಯ ಮತ್ತು ನೀರುಣಿಸುವ ರೀತಿಯಲ್ಲಿ ವಿದ್ಯಾರ್ಥಿಗಳ ಸಂಘವೊಂದು ಮಾರ್ಪಾಡು ಮಾಡಿದೆ. ಅವುಗಳನ್ನು ತಾಲೂಕಿನ ಅನೇಕ ಕಡೆಗಳಲ್ಲಿ ಗಿಡ, ಮನೆಯ ಮೇಲ್ಛಾವಣಿ, ಕಂಬಗಳಿಗೆ ಅಳವಡಿಸಿ ಪ್ರತಿ ಎರಡು ದಿನಕ್ಕೊಮ್ಮೆ ನೀರು ಮತ್ತು ಧವಸ ಧಾನ್ಯ ಹಾಕುವ ಮೂಲಕ ಪಕ್ಷಿಗಳಿಗೆ ನೆರವಾಗುವ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ಕೈಜೋಡಿಸಿರುವ ಪೊಲೀಸ್ ಪೇದೆ ಮಲ್ಲಿಕಾರ್ಜುನ ಮತ್ತು ಅನೇಕ ಗಣ್ಯರು ಆಹಾರ ಧಾನ್ಯವನ್ನು ದೇಣಿಗೆಯಾಗಿ ನೀಡಿದ್ದಾರೆ.