ಕಲಬುರಗಿ: ಸಂಸದ ಡಾ. ಉಮೇಶ್ ಜಾಧವ್ ನಗರದ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪೊಲೀಸ್ ವಸತಿ ಗೃಹ, ಪೊಲೀಸ್ ಸ್ಟೇಷನ್ ಸೇರಿದಂತೆ ರೈಲ್ವೆ ನಿಲ್ದಾಣವನ್ನು ವೀಕ್ಷಿಸಿದರು.
ಕಲಬುರಗಿ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಸಂಸದ ಉಮೇಶ್ ಜಾಧವ್ ಭೇಟಿ - undefined
ಕಲಬರಗಿ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಸಂಸದ ಡಾ. ಉಮೇಶ್ ಜಾಧವ್, ಪೊಲೀಸ್ ವಸತಿ ಗೃಹ, ಪೊಲೀಸ್ ಸ್ಟೇಷನ್ ಸೇರಿದಂತೆ ರೈಲು ನಿಲ್ದಾಣವನ್ನು ವೀಕ್ಷಿಸಿ ಅಲ್ಲಿನ ಸಮಸ್ಯೆಗಳ ಕುರಿತು ರೈಲ್ವೆ ಸಚಿವರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.
![ಕಲಬುರಗಿ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಸಂಸದ ಉಮೇಶ್ ಜಾಧವ್ ಭೇಟಿ](https://etvbharatimages.akamaized.net/etvbharat/prod-images/768-512-3773559-thumbnail-3x2-vij.jpg)
ಕಲಬುರಗಿ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಸಂಸದ ಡಾ.ಉಮೇಶ್ ಜಾಧವ್
ಈ ವೇಳೆ ಸ್ಷೇಷನ್ ಮ್ಯಾನೇಜರ್ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಜಾಧವ್, ನಂತರ ಇಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಡಿ. ರೈಲ್ವೆ ಸಚಿವರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸುತ್ತೇನೆ ಎಂದಿದ್ದಾರೆ. ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸ್ಟೇಷನ್ ನಿರ್ಮಾಣ ಹಾಗೂ ಪೊಲೀಸ್ ವಸತಿ ಗೃಹ ಪುನರ್ ನಿರ್ಮಾಣ ಮಾಡುವುದಾಗಿ ಭರವಸೆ ಕೂಡ ನೀಡಿದ ಸಂಸದರಿಗೆ ಸ್ಟೇಷನ್ ಮ್ಯಾನೇಜರ್ ಹಾಗೂ ಪೊಲೀಸ್ ಅಧಿಕಾಗಳು ರೈಲ್ವೆ ನಿಲ್ದಾಣದಲ್ಲಿರುವ ಸಮಸ್ಯೆಗಳ ಪಟ್ಟಿ ನೀಡಿದರು.