ಕಲಬುರಗಿ: ಕಾಂಗ್ರೆಸ್ನವರು ಮೋಸರಿನಲ್ಲಿ ಕಲ್ಲು ಹುಡುಕೊ ಕೆಲಸ ಮಾಡ್ತಾರೆ. ನಮ್ಮ ತಾಕತ್ತು ಏನು ಎಂಬುದು ಜನತೆಗೆ ಗೊತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಸಂಸದ ಉಮೇಶ್ ಜಾಧವ್ ಹರಿಹಾಯ್ದರು.
ಕಾಂಗ್ರೆಸ್ನವರದ್ದು ಮೋಸರಲ್ಲಿ ಕಲ್ಲು ಹುಡುಕುವ ಕೆಲಸ: ಸಂಸದ ಉಮೇಶ್ ಜಾಧವ್
ಬಿಜೆಪಿ ನಾಯಕರು ಕಲಬುರಗಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪವನ್ನು ಸಂಸದ ಉಮೇಶ್ ಜಾಧವ್ ಅಲ್ಲಗಳೆದಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಾಧವ್, ಬಿಜೆಪಿ ನಾಯಕರು ಕಲಬುರಗಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪವನ್ನು ಅಲ್ಲಗಳೆದರು. ಕೊರೊನಾ ಪ್ರಾರಂಭದಿಂದಲೂ ನಾವು ಜನತೆಯ ಸೇವೆಯಲ್ಲಿದೆ. ನಮ್ಮ ತಾಕತ್ತು ಜನರಿಗೆ ಗೊತ್ತಿದೆ. ಈಗ ಪ್ರವಾಹದಂತಹ ಸಂಕಷ್ಟ ಪರಿಸ್ಥಿತಿ ಎದುರಾಗಿದೆ. ಈಗಲೂ ನಾವು ಜನರ ಸೇವೆಯಲ್ಲಿ ತೊಡಗಿದ್ದೇವೆ. ವಿರೋಧ ಪಕ್ಷದವರು ಸುಖಾಸುಮ್ಮನೆ ರಾಜಕೀಯ ಕಾರಣದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಾವು ಪ್ರವಾಹ ಪೀಡಿತರ ಜೊತೆಗೆ ಯಾವಾಗಲೂ ಕೈ ಜೋಡಿಸುವ ಕೆಲಸ ಮಾಡುತ್ತೇವೆ. ರಾಜಕೀಯ ಬಿಟ್ಟು ಒಂದಾಗಿ ಜನರ ಕಷ್ಟಕ್ಕೆ ಸ್ಪಂದಿಸೋಣ ಎಂದರು.
ಸಿಎಂ ಅವರಿಗೆ ವೈಮಾನಿಕ ಸಮೀಕ್ಷೆ ಮಾಡಲು ಮನವಿ ಮಾಡಿದ್ದೇವೆ. ಉತ್ತರ ಕರ್ನಾಟಕದ ಜನ ಹೆದರುವ ಅವಶ್ಯಕತೆ ಇಲ್ಲ. ರಾಷ್ಟ್ರೀಯ ವಿಪತ್ತು ಘೋಷಿಸುವಂತೆ ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.