ಕರ್ನಾಟಕ

karnataka

ETV Bharat / state

ಅನೈತಿಕ ಸಂಬಂಧಕ್ಕೆ ಅಡ್ಡಿ: ಮಗನನ್ನೇ ಕೊಂದ ತಾಯಿ - ಅನೈತಿಕ ಸಂಬಂಧಕ್ಕೆ ಮಗನ ಕೊಲೆ

ಸೇಡಂ ತಾಲೂಕಿನ ಮದನಾ ಗ್ರಾಮದಲ್ಲಿ ತಾಯಿಯೇ ತನ್ನ ಮಗನನ್ನು ಕೊಲೆ ಮಾಡಿದ್ದಾಳೆ. ಈ ಪ್ರಕರಣ ಸಂಬಂಧ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

Mother murder her son
ಕೊಲೆಯಾದ ವ್ಯಕ್ತಿ

By

Published : Sep 12, 2021, 10:58 PM IST

ಸೇಡಂ:ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಪ್ರಿಯಕರನೊಂದಿಗೆ ಸೇರಿಕೊಂಡು ತಾಯಿಯೇ ಮಗನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಮದನಾ ಗ್ರಾಮದಲ್ಲಿ ನಡೆದಿದೆ.

ನಾಗೇಶ ರಾಮು ಮದ್ದೂರ (25) ಕೊಲೆಯಾದ ದುರ್ದೈವಿ. ಈತ ಮರಗೆಲಸ ಮಾಡಿಕೊಂಡಿದ್ದನು. ಐದಾರು ವರ್ಷಗಳಿಂದ ಮುನಕನಪಲ್ಲಿಯ ಭರತ್​​ ಕುಮಾರ ಶರಣಯ್ಯಸ್ವಾಮಿ ಎಂಬುವವನ ಜೊತೆ ಮದನಾ ಗ್ರಾಮದ ಮೃತ ನಾಗೇಶ್​​ ತಾಯಿ ಎಂಬುವವರು ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಷಯ ನಾಗೇಶ್​​ಗೆ ತಿಳಿದು ಆಕ್ಷೇಪ ವ್ಯಕ್ತಪಡಿಸಿದ್ದನು.

ಇದರಿಂದ ಕೋಪಗೊಂಡ ತಾಯಿ, ಮಗಳು ಹಾಗೂ ಪ್ರಿಯಕರ ಸೇರಿಕೊಂಡು ಹಗ್ಗದಿಂದ ಕುತ್ತಿಗೆ ಬಿಗಿದು ನಾಗೇಶನನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಆರೋಪಿಗಳು ಮುಂದಾಗಿದ್ದರು.

ಘಟನೆ ಸಂಬಂಧ ತನಿಖೆ ಕೈಗೊಂಡ ಮುಧೋಳ ಪಿಐ ಆನಂದ್​​ ರಾವ್​​ ತಲೆಮರೆಸಿಕೊಂಡಿದ್ದ ಮೂರು ಜನ ಕೊಲೆಗಟುಕರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ: ಕೊಡಗು ಜಿಲ್ಲೆಯಲ್ಲಿ ಮೊದಲ ಡೋಸ್ ವ್ಯಾಕ್ಸಿನ್ ಪಡೆದ 953 ಜನರಿಗೆ ಕೊರೊನಾ

ABOUT THE AUTHOR

...view details