ಕಲಬುರಗಿ: ವಿದ್ಯುತ್ ತಗುಲಿ ತಾಯಿ ಮತ್ತು ಮಗ ಮೃತಪಟ್ಟ ಹೃದಯವಿದ್ರಾವಕ ಘಟನೆ ನಗರದ ಯತಿಮಖಾನಾದಲ್ಲಿ ನಡೆದಿದೆ.
ಶಾಹಿನಾಬೇಗಂ (40) ಮತ್ತು ಸೋಹೆಲ್ ಖಾನ್ (20) ಎಂಬುವರು ಮೃತ ದುರ್ದೈವಿಗಳು. ಇಬ್ಬರು ಪತ್ರಾಸು ಮನೆಯಲ್ಲಿ ವಾಸಿಸುತ್ತಿದ್ದು, ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಮಳೆ ಬಂದು ಮನೆ ಸೋರಲು ಆರಂಭಿಸಿದೆ.
ಮಲಗಿದ ಸೋಹೆಲ್ ಎದ್ದು ಅದನ್ನು ಸರಿಪಡಿಸಲು ಹೋಗಿದ್ದಾನೆ. ಈ ವೇಳೆ ಆತನಿಗೆ ವಿದ್ಯುತ್ ತಂತಿ ತಗುಲಿ ಒದ್ದಾಡುತ್ತಿದ್ದಾಗ ತಾಯಿ ಶಾಹಿನಾಬೇಗಂ ರಕ್ಷಣೆಗೆ ಹೋಗಿದ್ದಾರೆ. ಅವರಿಗೂ ಸಹ ವಿದ್ಯುತ್ ತಗುಲಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದು ಸ್ಟೇಷನ್ ಬಜಾರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ;ಪಂಚರಾಜ್ಯಗಳಲ್ಲಿ ಸೋತು ಸುಣ್ಣವಾದ ಕಾಂಗ್ರೆಸ್.. ನಾಳೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆ