ಕಲಬುರಗಿ: ಹಗಲು ಮನೆ ಕಟ್ಟುವ ಸೆಂಟ್ರಿಂಗ್ ಕೆಲಸ, ಸಂಜೆಯಾಗುತ್ತಿದ್ದಂತೆ ಬೈಕ್ ಕಳ್ಳತನ ಕೆಲಸಕ್ಕೆ ಇಳಿಯುತ್ತಿದ್ದ ಕುಖ್ಯಾತ ಬೈಕ್ ಕಳ್ಳನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಹಗಲು ಮನೆ ಸೆಂಟ್ರಿಂಗ್, ರಾತ್ರಿ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳ ಅರೆಸ್ಟ್ - Kannada news
ಕಲಬುರಗಿಯ ಹಲವಡೆ ನಿಲ್ಲಿಸಿದ್ದ ಬೈಕ್ ಕದ್ದು ದರ್ಗಾ ರಸ್ತೆಯಲ್ಲಿರುವ ತನ್ನ ಸಹಚರ ಶೇಖ ಸಿದ್ಧಕಿ ಎಂಬಾತನ ಗ್ಯಾರೇಜ್ನಲ್ಲಿ ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆರೋಪಿಯ ಹೆಡೆಮೂರಿ ಕಟ್ಟಿದ್ದಾರೆ.
ನಗರದ ತಾಜ್ ನಗರದ ನಿವಾಸಿ ಶೇಕ್ ಇಸ್ಮಾಯಿಲ್ ಜಮಾದಾರ್ (23) ಬಂಧಿತ ಆರೋಪಿ. 6 ಲಕ್ಷ ಮೌಲ್ಯದ ವಿವಿಧ ಕಂಪನಿಯ 19 ಬೈಕ್ಗಳು ಬಂಧಿತನಿಂದ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಹಗಲು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಆರೋಪಿ ಇಸ್ಮಾಯಿಲ್, ಹಣ ಗಳಿಸುವ ದುರಾಸೆಯಿಂದ ಸಂಜೆಯಾಗುತ್ತಿದ್ದಂತೆ ಬೈಕ್ ಕಳ್ಳತನ ಮಾಡುತ್ತಿದ್ದ.
ಕಲಬುರಗಿಯ ಹಲವೆಡೆ ನಿಲ್ಲಿಸಿದ್ದ ಬೈಕ್ ಕದ್ದು ದರ್ಗಾ ರಸ್ತೆಯಲ್ಲಿರುವ ತನ್ನ ಸಹಚರ ಶೇಖ ಸಿದ್ಧಕಿ ಎಂಬಾತನ ಗ್ಯಾರೇಜ್ನಲ್ಲಿ ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಆರೋಪಿಯ ಹೆಡೆಮೂರಿ ಕಟ್ಟಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಶೇಖ ಸಿದ್ಧಕಿ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.