ಸೇಡಂ (ಕಲಬುರಗಿ): ತಾಲೂಕಿನ ಸಂಗಾವಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಲುಕಿದ ಸಿಬ್ಬಂದಿಗಳ ರಕ್ಷಣಾ ಕಾರ್ಯ ಮುಂದುವರೆದಿದೆ.
ಸೇಡಂ: ಮುಂದುವರೆದ ವಸತಿ ಶಾಲಾ ಸಿಬ್ಬಂದಿ ರಕ್ಷಣಾ ಕಾರ್ಯ - ಕಾಗೀಣಾ ನದಿಯ ಪ್ರವಾಹ
ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ನಡೆಸಿ ಸಿಲುಕಿದವರ ಪೈಕಿ ಆರು ಜನರನ್ನು ರಕ್ಷಿಸಿದ್ದು, ಇನ್ನುಳಿದವರ ರಕ್ಷಣಾ ಕಾರ್ಯ ಮುಂದುವರೆದಿದೆ.
![ಸೇಡಂ: ಮುಂದುವರೆದ ವಸತಿ ಶಾಲಾ ಸಿಬ್ಬಂದಿ ರಕ್ಷಣಾ ಕಾರ್ಯ morarji-school-staff-rescue-operation](https://etvbharatimages.akamaized.net/etvbharat/prod-images/768-512-9176284-thumbnail-3x2-nin.jpeg)
morarji-school-staff-rescue-operation
ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ನಡೆಸಿ ಸಿಲುಕಿದವರ ಪೈಕಿ ಆರು ಜನರನ್ನು ರಕ್ಷಿಸಿದ್ದಾರೆ. ಇನ್ನುಳಿದವರ ರಕ್ಷಣಾ ಕಾರ್ಯ ಮುಂದುವರೆದಿದ್ದು, ಕಾಗೀಣಾ ನದಿ ನೀರಿನ ರಭಸ ಹೆಚ್ಚಾದ ಪರಿಣಾಮ ರಕ್ಷಣಾ ಕಾರ್ಯಕ್ಕೆ ಅಡಚಣೆಯುಂಟಾಗುತ್ತಿದೆ.
ನಿಮಿಷ ನಿಮಿಷಕ್ಕೂ ಕಾಗೀಣಾ ನದಿಯ ಪ್ರವಾಹ ಏರುಮುಖದಲ್ಲಿ ಸಾಗಿದೆ. ಇದರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಂಪೌಂಡ್ ಒಡೆದು ನೀರು ಒಳಹೊಕ್ಕಿದೆ. ಹೀಗಾಗಿ ಒಳಗೆ ಸಿಲುಕಿರುವ ಸಿಬ್ಬಂದಿ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.