ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಮೋದಿ ಮ್ಯಾಜಿಕ್ ವರ್ಕೌಟ್ ಆಗಲ್ಲ: ಹೆಚ್​ಡಿಕೆ - ETv Bharat kannada news

ರಾಜ್ಯದಲ್ಲಿ ಮೋದಿ ಮ್ಯಾಜಿಕ್ ವರ್ಕೌಟ್ ಆಗಲ್ಲ ಎಂದು ಕುಮಾರಸ್ವಾಮಿ ಗುಜರಾತ್ ಚುನಾವಣೆ ಫಲಿತಾಂಶ ಕುರಿತಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದರು.

Former CM HD Kumaraswamy
ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ

By

Published : Dec 8, 2022, 8:16 PM IST

ಕಲಬುರಗಿ:ರಾಜ್ಯದ ಜನರಿಗೆ ಮೋದಿ ಮ್ಯಾಜಿಕ್ ಬಗ್ಗೆ ಈಗಾಗಲೇ ಗೊತ್ತಾಗಿದೆ. ಮೋದಿ ಅವರು ಬರೇ ಆಕಾಶ ತೋರಿಸಿ ಹೋಗುತ್ತಾರೆ. ಇದೊಂದು ನಿರೀಕ್ಷಿತ ಫಲಿತಾಂಶ ಎಂದರು.

ಗುಜರಾತ್​ನಲ್ಲಿ ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳ ಶಕ್ತಿ ಕುಂದಿದೆ. ಈ ಫಲಿತಾಂಶ ಬಿಜೆಪಿ ಸಾಧನೆ ಅಲ್ಲ. ಗುಜರಾತ್ ಚುನಾವಣೆ ರಾಜ್ಯಕ್ಕೆ ದಿಕ್ಸೂಚಿಯೂ ಆಗಲಾರದು. ಅಲ್ಲಿಯ ರಾಜಕಾರಣವೇ ಬೇರೆ, ಇಲ್ಲಿನ ರಾಜಕಾರಣವೇ ಬೇರೆ. ಅಲ್ಲಿನ ಫಲಿತಾಂಶ ನೋಡಿ ಕನ್ನಡಿಗರು ಮತ ಹಾಕಲ್ಲ ಎಂದು ಹೇಳಿದರು.

ಆಪ್‌ಗೆ ಬಿಜೆಪಿ ಪಂಡಿಂಗ್ ಮಾಡಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ಆ ಬಗ್ಗೆ ಲಘುವಾಗಿ ಮಾತನಾಡಲ್ಲ. ಅದು ಬಿಜೆಪಿ ಬಿ ಟೀಮ್ ಅಂತ ನಾನು ಹೇಳಲ್ಲ. ಈ ಹಿಂದೆ ಕಾಂಗ್ರೆಸ್​ನವರು ಜೆಡಿಎಸ್ ಅ​ನ್ನು ಬಿ ಟೀಮ್ ಅಂದಿದ್ದರು. ನಾಯಕತ್ವದ ಕೊರತೆಯಿಂದ ಕಾಂಗ್ರೆಸ್ ನಾಯಕರು ಬೇರೆಯವರ ಮೇಲೆ ಹಾಕಿ ಅವರಿಂದ ನಮಗೆ ತೊಂದರೆ ಆಯ್ತು ಅನ್ನೋದು ಸರಿಯಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ :ಗುಜರಾತ್​​ ಫಲಿತಾಂಶ ದೊಡ್ಡ ಸ್ಫೂರ್ತಿ, ರಾಜ್ಯದಲ್ಲೂ 140ಕ್ಕೂ ಹೆಚ್ಚು ಸ್ಥಾನ ಗೆದ್ದು ಬಿಜೆಪಿಗೇ ಅಧಿಕಾರ: ಬಿಎಸ್‌ವೈ

ABOUT THE AUTHOR

...view details