ಕರ್ನಾಟಕ

karnataka

ETV Bharat / state

ಮೋದಿ ಕ್ರೈಯಿಂಗ್ ಬೇಬಿ, ಬೆಳಗ್ಗೆಯಿಂದ ಸಂಜೆವರೆಗೆ ಅಳುವುದೇ ಕೆಲಸ: ಖರ್ಗೆ ವ್ಯಂಗ್ಯ - ಬೆಳಗ್ಗೆಯಿಂದ ಸಂಜೆವರೆಗೆ ಅಳುವುದು ಕೆಲಸ

ಮೋದಿ ಒಬ್ಬರು ಕ್ರೈಯಿಂಗ್ ಬೇಬಿ. ಬೆಳಗ್ಗೆಯಿಂದ ಸಂಜೆವರೆಗೆ ಅಳುವ ಕೆಲಸ ಮಾಡುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಟೀಕಿಸಿದರು.

AICC president Kharge says  crying from morning to evening is a job  Modi is a crying baby  ಮೋದಿ ಒಬ್ಬರು ಕ್ರೈಯಿಂಗ್ ಬೇಬಿ  ಬೆಳಗ್ಗೆಯಿಂದ ಸಂಜೆವರೆಗೆ ಅಳುವುದು ಕೆಲಸ  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಹೇಳಿಕೆ

By

Published : May 4, 2023, 8:27 AM IST

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಹೇಳಿಕೆ

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಳಗ್ಗೆಯಿಂದ ಸಂಜೆವರೆಗೆ ಅಳುವುದು ರೂಢಿಯಾಗಿಬಿಟ್ಟಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ. ಕಲಬುರಗಿಯ ತಮ್ಮ ನಿವಾಸದಲ್ಲಿ ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು 91 ಬಾರಿ ನನ್ನನ್ನು ವೈಯಕ್ತಿಕವಾಗಿ ನಿಂದಿಸಿದ್ದಾರೆ ಎನ್ನುವ ಮೋದಿ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಡಿರುವ ಹಗುರ ಮಾತುಗಳನ್ನು ಮರೆತಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ವಿಡೋ (ವಿಧವೆ), ಇಟಲಿ ಗರ್ಲ್ ಎನ್ನುವ ಪದ ಬಳಸಿದ್ದರು. ರಾಹುಲ್‍ ಗಾಂಧಿ ಒಬ್ಬ ಹೈಬ್ರಿಡ್ ಎಂದಿದ್ದರು. ಇಂಥ ಮಾತುಗಳನ್ನು ನಮ್ಮ ಪಕ್ಷದ ಹೈಕಮಾಂಡ್ ವಿರುದ್ಧ ಆಡಿದ್ದರೂ ನಾವ್ಯಾರೂ ಮೋದಿ ಅವರಂತೆ ಅಳುತ್ತಾ ಕುಳಿತಿಲ್ಲ. ಇದೊಂದು ವಾರ್ ಅನ್ನೋದು ನಮಗೆ ಗೊತ್ತು. ಅಳುತ್ತಾ ಕುಳಿತರೆ ಕೆಲಸ ಸಾಗಲ್ಲ ಎಂದು ಕುಟುಕಿದರು.

ತಾವೊಬ್ಬ ಹಿಂದುಳಿದ ವರ್ಗದ ವ್ಯಕ್ತಿ ಆಗಿರುವುದರಿಂದ ತಮ್ಮ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ಮೋದಿ ಪದೇ ಪದೆ ಹೇಳ್ತಾರೆ. ಆದರೆ, ಮೋದಿಯವರು ಒಂದು ಅಂಶವನ್ನು ನೆನಪಿಡಬೇಕು. ನಾನು ದಲಿತ. ಮೋದಿಗಿಂತಲೂ ಕೆಳಗಿದ್ದೇನೆ. ಮೊದಲು ನನ್ನ ತಲೆಯ ಮೇಲೆ ಕಾಲಿಟ್ಟ ಮೇಲೆಯೇ ನಿಮ್ಮ ಕಡೆಗೆ ಬರುತ್ತಾರೆ ಎಂದು ಸೂಚ್ಯವಾಗಿ ಹೇಳಿದರು.

ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಕುರಿತು ಪ್ರಸ್ತಾಪಿಸಿದ ಎಐಸಿಸಿ ಅಧ್ಯಕ್ಷ ಖರ್ಗೆ, ಒಂದು ವೇಳೆ ಕಾಂಗ್ರೆಸ್ ಸರಕಾರ ರಚನೆಗೊಂಡರೆ ಮೊದಲ ಸಂಪುಟ ಸಭೆಯಲ್ಲಿಯೇ ಎಲ್ಲ ಆಶ್ವಾಸನೆಗಳನ್ನು ಈಡೇರಿಸಲಾಗುವುದು ಎಂದರು. ಪ್ರಣಾಳಿಕೆಗೆ ವಾರಂಟಿಯೂ ಇಲ್ಲ, ಗ್ಯಾರಂಟಿಯೂ ಇಲ್ಲ ಎಂಬ ಪ್ರಧಾನಿ ಮೋದಿ ಟೀಕೆಗೆ ಪ್ರತಿಕ್ರಿಯಿಸಿ, ವಿರೋಧ ಪಕ್ಷದವರು ಎಂದ ಮೇಲೆ ಸಹಜವಾಗಿಯೇ ಟೀಕಿಸುತ್ತಾರೆ. ಈ ಹಿಂದೆ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿದ್ದ ಬಹುತೇಕ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ ಎಂದು ತಿಳಿಸಿದರು.

ಬಜರಂಗದಳ ನಿಷೇಧ ವಿಚಾರ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಸಂಘಟನೆ ನಿಷೇಧಿಸುವ ಅಂಶದ ಕುರಿತು ಕೇಳಿದ ಪ್ರಶ್ನೆಗೆ, ಪ್ರಣಾಳಿಕೆ ಸಮಿತಿಯ ಅಧ್ಯಕ್ಷರು ಈ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಕೆಲವರು ರಾತ್ರಿಯಲ್ಲಿ ನಾನ್ ವೆಜ್ ತಿಂದು ಹಗಲು ಹೊತ್ತಲ್ಲಿ ನಾನ್ ವೆಜ್ ತಿನ್ನುವವರನ್ನು ಬೈಯ್ದಾಡಿಕೊಂಡು ಓಡಾಡುತ್ತಾರೆ. ಜನರ ಮಧ್ಯೆ ಜಗಳ ಹಚ್ಚಿ ವೋಟು ಪಡೆಯುವ ಗಿಮಿಕ್ ಒಳ್ಳೆಯದಲ್ಲ ಎಂದು ಖರ್ಗೆ ಕಿವಿಮಾತು ಹೇಳಿದರು.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಅನುಷ್ಠಾನಕ್ಕೆ ತರಬೇಕಾದರೆ ಹಣ ಎಲ್ಲಿಂದ ತರ್ತಾರೆ ಎಂಬ ಪ್ರಶ್ನೆಗೆ, ಮೊದಲು ನಮ್ಮ ಸರಕಾರ ಅಧಿಕಾರಕ್ಕೆ ಬರಬೇಕು. ನಮ್ಮ ಕೈಗೆ ಪ್ರಶ್ನೆ ಪತ್ರಿಕೆಯನ್ನೇ ನೀಡದೆ ಉತ್ತರ ಕೊಡಿ ಎಂದರೆ ಹೇಗೆ?. ಅಧಿಕಾರಕ್ಕೆ ಬಂದ್ಮೇಲೆ ನಾವು ನಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುತ್ತೇವೆ ಎಂದರು.

ಇದನ್ನೂ ಓದಿ:ಮೇ 6ಕ್ಕೆ ಸೋನಿಯಾ ಗಾಂಧಿ ಚುನಾವಣಾ ಅಬ್ಬರ.. ಶೆಟ್ಟರ್​ ಕ್ಷೇತ್ರದಿಂದಲೇ ರಣಕಹಳೆ

ABOUT THE AUTHOR

...view details