ಕರ್ನಾಟಕ

karnataka

ETV Bharat / state

ಪೌರತ್ವದ ವಿಚಾರದಲ್ಲಿ ಮೋದಿ, ಶಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ: ಖರ್ಗೆ - ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ

ದೇಶದಲ್ಲಿ ಈಗಾಗಲೇ ಹಲವು ಬಾರಿ ಪೌರತ್ವ ತಿದ್ದುಪಡಿ ಆಗಿದ್ರು, ಈ ರೀತಿ ಯಾವತ್ತೂ ಗೊಂದಲ ಸೃಷ್ಟಿಯಾಗಿರಲಿಲ್ಲ‌. ಪೌರತ್ವದ ವಿಚಾರದಲ್ಲಿ ಈಗ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಲಬುರಗಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ​​​​​​​

mallikarjun-kharge
ಮಲ್ಲಿಕಾರ್ಜುನ ಖರ್ಗೆ

By

Published : Jan 21, 2020, 4:29 PM IST

ಕಲಬುರಗಿ: ದೇಶದಲ್ಲಿ ಈಗಾಗಲೇ ಹಲವು ಬಾರಿ ಪೌರತ್ವ ತಿದ್ದುಪಡಿ ಆಗಿದ್ರು, ಈ ರೀತಿ ಯಾವತ್ತೂ ಗೊಂದಲ ಸೃಷ್ಟಿಯಾಗಿರಲಿಲ್ಲ‌. ಆದ್ರೆ ಪ್ರಸ್ತುತ ಪೌರತ್ವದ ವಿಚಾರದಲ್ಲಿ ಮೋದಿ, ಅಮಿತ್ ಶಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೌರತ್ವ ಕಾಯ್ದೆ ಈಗ ಬಂದಿದ್ದಲ್ಲ. ಈಗಾಗಲೇ ಅನೇಕ ತಿದ್ದುಪಡಿಗಳಾಗಿವೆ. ಆದ್ರೆ ಇಂತಹ ಗೊಂದಲವನ್ನು ಯಾರೊಬ್ಬರೂ ಸೃಷ್ಟಿಸಿರಲಿಲ್ಲ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಇಂತಹ ತಿದ್ದುಪಡಿ ತಂದು ಜನರಲ್ಲಿ ಕೆಟ್ಟ ಭಾವನೆ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಮೋದಿ, ಶಾ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಕಿಡಿ

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನಗಳ ಕುರಿತು ಮಾತನಾಡಿದ ಅವರು, ಯಾರನ್ನ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಬೇಕು ಅನ್ನೋದರ ಬಗ್ಗೆ ಹೈಕಮಾಂಡ್​ತೀರ್ಮಾನಿಸಲಿದೆ. ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ಬೇರೆಯವರು ಯಾಕೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ ಅಂತಾ ಅರ್ಥ ಆಗುತ್ತಿಲ್ಲ ಎಂದರು.

ಸ್ಥಳೀಯ ವಾತಾವರಣಕ್ಕನುಗುಣವಾಗಿ ಸಮಯ ಸಂದರ್ಭ ನೋಡಿಕೊಂಡು ಎಷ್ಟು ಕಾರ್ಯಾಧ್ಯಕ್ಷರನ್ನು ಮಾಡಬೇಕು ಅನ್ನೋದನ್ನು ಎಐಸಿಸಿ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತೀರ್ಮಾನಿಸಲಿದ್ದಾರೆ. ಹೈಕಮಾಂಡ್​ನ​ ಯಾವುದೇ ಆದೇಶಕ್ಕೆ ನಾನಾಗಲಿ, ಸಿದ್ದರಾಮಯ್ಯ ಆಗಲಿ ಬದ್ಧರಾಗಿದ್ದೇವೆ ಎಂದರು.

ಇನ್ನು, ಮಂಗಳೂರು ಏರ್​ಪೋರ್ಟ್ ನಲ್ಲಿ ಪತ್ತೆಯಾದ ಸಜೀವ ಬಾಂಬ್ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಈ ಕುರಿತು ಸೂಕ್ತ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಯಲಿ. ತಪ್ಪಿತಸ್ಥರು ಯಾರೇ ಇರಲಿ, ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಖರ್ಗೆ ಒತ್ತಾಯಿಸಿದರು.

ABOUT THE AUTHOR

...view details