ಕಲಬುರಗಿ:ಪ್ರಯಾಣಿಕರ ಸೋಗಿನಲ್ಲಿ ಬಂದ ಕಳ್ಳನೋರ್ವ ಜೇಬಿನಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕಲಬುರಗಿ ರೈಲು ನಿಲ್ದಾಣದಲ್ಲಿ ನಡೆದಿದೆ.
ಯಾತ್ರಿಯಾಂ ಕೃಪಯಾ ಧ್ಯಾನ್ ದೇ... ಕಲಬುರಗಿ ರೈಲ್ವೇ ನಿಲ್ದಾಣದಲ್ಲಿದ್ದಾರೆ ಮೊಬೈಲ್ ಚೋರರು! - kalaburagi news
ಕಲಬುರಗಿ ರೈಲು ನಿಲ್ದಾಣದಲ್ಲಿ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಮುಂಬೈ-ಬೆಂಗಳೂರು ಸಿದ್ದೇಶ್ವರ ಉದ್ಯಾನ ಎಕ್ಸ್‌ಪ್ರೆಸ್ ಪ್ರಯಾಣಿಕರ ಮೊಬೈಲ್ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ಕಲಬುರಗಿ ರೈಲು ನಿಲ್ದಾಣದಲ್ಲಿ ಕಳ್ಳನ ಕೈಚಳಕ
ಮುಂಬೈ- ಬೆಂಗಳೂರು ಸಿದ್ದೇಶ್ವರ ಉದ್ಯಾನ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಕಲಬುರಗಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕನ ಸೋಗಿನಲ್ಲಿ ಬಂದು ಪ್ರಯಾಣಿಕರೊಂದಿಗೆ ತಾನು ರೈಲು ಏರಿ, ರೈಲು ಬಿಡುವ ಸಮಯಕ್ಕೆ ಜೇಬಿನಲ್ಲಿದ್ದ ₹ 22 ಸಾವಿರ ಮೌಲ್ಯದ ವಿವೋ ಕಂಪನಿಯ ಮೊಬೈಲ್ ಕಳ್ಳತನ ಮಾಡಿ, ಗೋಡೆ ಜಿಗಿದು ಪರಾರಿಯಾಗಿದ್ದಾನೆ.
ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯದ ಆಧಾರದ ಮೇಲೆ ಪೋಲಿಸರು ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಕುರಿತು ವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.