ಕಲಬುರಗಿ:ಐಪಿಎಲ್ ಬೆಟ್ಟಿಂಗ್ ಆರೋಪ ಹಿನ್ನೆಲೆ ಕಲಬುರಗಿ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರ ಸಂಬಂಧಿಯೊಬ್ಬರು ತಲೆಮರೆಸಿಕೊಂಡಿದ್ದಾರೆ. ಈ ಕುರಿತು ಸರ್ಕಾರ ಮೌನವಾಗಿರುವುದನ್ನು ಗಮನಿಸಿದರೆ ಆರೋಪಿಗಳನ್ನು ರಕ್ಷಿಸುತ್ತಿರುವಂತೆ ಕಂಡುಬರುತ್ತಿದೆ ಎಂದು ಕೆಪಿಸಿಸಿ ವಕ್ತಾರರು ಆಗಿರುವ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬಿಜೆಪಿ ಶಾಸಕನ ಸಂಬಂಧಿ ವಿರುದ್ಧ ಐಪಿಎಲ್ ಬೆಟ್ಟಿಂಗ್ ಆರೋಪ: ಸರ್ಕಾರಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ತರಾಟೆ
ಕಲಬುರಗಿಯಲ್ಲಿ ಶಾಸಕರೊಬ್ಬರ ವಿರುದ್ಧ ಕೇಳಿ ಬಂದ ಐಪಿಎಲ್ ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಆ ಶಾಸಕನ ಸಂಬಂಧಿ ತಲೆಮರೆಸಿಕೊಂಡಿದ್ದಾರೆ. ಈ ಘಟನೆ ನಡೆದು ಐದು ದಿನಗಳಾದರೂ ರಾಜ್ಯಸರ್ಕಾರ ಕ್ರಮಕ್ಕೆ ಮುಂದಾಗದಿರುವುದನ್ನು ನೋಡಿದ್ರೆ ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿರುವಂತೆ ಕಾಣುತ್ತಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಟ್ವೀಟ್
ಈ ಕುರಿತು ಟ್ವೀಟ್ ಮಾಡಿರುವ ಅವರು ''ಮುಖ್ಯಮಂತ್ರಿಗಳಾಗಲಿ ಹಾಗೂ ಗೃಹ ಸಚಿವರಾಗಲಿ ಗುಪ್ತಚರ ಇಲಾಖೆಯಿಂದ ಪ್ರತಿನಿತ್ಯ ಮಾಹಿತಿ ಪಡೆದುಕೊಂಡಂತೆ ಕಂಡುಬರುತ್ತಿಲ್ಲ. ಯಾಕೆಂದರೆ, ಐಪಿಎಲ್ ಬೆಟ್ಟಿಂಗ್ ಕುರಿತು ಸೋಲಾಪುರ ಪೊಲೀಸರು ದಾಳಿ ನಡೆದ ನಂತರ ಬಿಜೆಪಿ ಶಾಸಕರ ಸಂಬಂಧಿಯೊಬ್ಬರು ಪರಾರಿಯಾಗಿದ್ದಾರೆ. ಘಟನೆ ನಡೆದು ಐದು ದಿನಗಳಾದರೂ ಸರ್ಕಾರ ಮೌನವಾಗಿದೆ. ಇದನ್ನು ಗಮನಿಸಿದರೆ, ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿರುವಂತೆ ಕಂಡುಬರುತ್ತಿದೆ" ಎಂದು ಟೀಕಿಸಿದ್ದಾರೆ.